ನವರಾತ್ರಿ ಆಫರ್: ರೈಲು ಪ್ರಯಾಣಿಕರಿಗೆ ವಿಶೇಷ ಮೆನು: ರೈಲ್ವೆ ಸಚಿವಾಲಯ ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾನುವಾರ ವಿಶೇಷ ಆಹಾರ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ. ನವದೆಹಲಿ: ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾನುವಾರ ವಿಶೇಷ ಆಹಾರ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.ಈ ಕುರಿತಂತೆ ರೈಲ್ವೇ ಸಚಿವಾಲಯ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಈ ವಿಶೇಷ ಮೆನುವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುವುದು ಮತ್ತು ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು ಎಂದು ಹೇಳಿದೆ. , , 26.09.22 - 05.10.22. ' ' , ://./VE7XkOqwzV 1323. ../RpYN6n7Nug“ನವರಾತ್ರಿಯ ಮಂಗಳಕರ ಹಬ್ಬದ ಸಂದರ್ಭದಲ್ಲಿ, ಭಾರತೀಯ ರೈಲ್ವೇಯು ವಿಶೇಷ ಮೆನುವನ್ನು ನಿಮಗೆ ಪೂರೈಸುತ್ತಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುತ್ತದೆ. ನಿಮ್ಮ ರೈಲು ಪ್ರಯಾಣಕ್ಕಾಗಿ ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ನವರಾತ್ರಿ ಭಕ್ಷ್ಯಗಳನ್ನು ಆರ್ಡರ್ ಮಾಡಿ, ಇಕಟರಿಂಗ್ ಗೆ ಭೇಟಿ ನೀಡಿ. .. ಅಥವಾ 1323 ಗೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.