: ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ದರ ಮತ್ತೆ ಏರುಮುಖ, ಇಲ್ಲಿದೆ ಹೊಸ ಮಾಹಿತಿ ಯುಗಾದಿ ಹಬ್ಬದ ಬಳಿಕ ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ. ಮುಂಬೈ: ಯುಗಾದಿ ಹಬ್ಬದ ಬಳಿಕ ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ.ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಮಂಗಳವಾರ ಮತ್ತೆ ದರ ಏರಿಕೆ ದಾಖಲಿಸಿದ್ದು, 10 ಗ್ರಾಂ ಚಿನ್ನದ ದರದಲ್ಲಿ 91 ರೂ ಏರಿಕೆಯಾಗಿದೆ.ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರದಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದ್ದು, 22 ಕ್ಯಾರಟ್‌ ಚಿನ್ನದ ದರ ಪ್ರತೀ ಗ್ರಾಂಗೆ 90 ರೂ ಏರಿಕೆಯಾಗಿ 6,795ರೂಗೆ ಏರಿಕೆಯಾಗಿದೆ. ಅಂತೆಯೇ 24 ಕ್ಯಾರೆಟ್ ಚಿನ್ನದ ಪ್ರತೀ ಗ್ರಾಂಗೆ 98 ರೂ ಏರಿಕೆಯಾಗಿ ಪ್ರತೀ ಗ್ರಾಂ ಚಿನ್ನ 7,413ರೂಗೆ ಮಾರಾಟವಾಗುತ್ತಿದೆ.ಬೆಳ್ಳಿ ದರದಲ್ಲೂ ಏರಿಕೆಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ ( ) ಬೆಲೆಯಲ್ಲಿ 10ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.75ನಷ್ಟಿದೆ