ದೇಶದ 70,000 ಪೆಟ್ರೋಲ್ ಪಂಪ್‌ಗಳ ಪೈಕಿ 22,000 ಪಂಪ್ ಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆ: ಕೇಂದ್ರ ದೇಶಾದ್ಯಂತ ಇರುವ 70,000 ಪೆಟ್ರೋಲ್ ಪಂಪ್‌ಗಳ ಪೈಕಿ 22,000 ಪೆಟ್ರೋಲ್ ಪಂಪ್ ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ... ನವದೆಹಲಿ: ದೇಶಾದ್ಯಂತ ಇರುವ 70,000 ಪೆಟ್ರೋಲ್ ಪಂಪ್‌ಗಳ ಪೈಕಿ 22,000 ಪೆಟ್ರೋಲ್ ಪಂಪ್ ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಉತ್ತರ ನೀಡಿದ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಮಹೇಂದ್ರ ನಾಥ್ ಪಾಂಡೆ, ಎಕ್ಸ್‌ಪ್ರೆಸ್ ಹೆದ್ದಾರಿಗಳು, ಹೆದ್ದಾರಿಗಳು ಮತ್ತು ಜನನಿಬಿಡ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇಂತಹ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಇದನ್ನು ಓದಿ: ಮಹಾರಾಷ್ಟ್ರ ಸರ್ಕಾರದಿಂದ ನೂತನ ವಿದ್ಯುತ್ ವಾಹನಗಳ ನೀತಿ: 2025 ರ ವೇಳೆಗೆ ಶೇ.10 ರಷ್ಟು ನೋಂದಣಿ ಗುರಿಭಾರತದಲ್ಲಿ(ಹೈಬ್ರಿಡ್) ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ(ಫೇಮ್ ಇಂಡಿಯಾ)- ಯೋಜನೆಯಡಿಯಲ್ಲಿ ವೇಗವಾಗಿ ಚಾರ್ಜಿಂಗ್ ಮಾಡುವ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲು ಪುಣೆಯ ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು.ಡಿಸೆಂಬರ್ 2022 ರ ವೇಳೆಗೆ ಇದನ್ನು ಮಾರುಕಟ್ಟೆಗೆ ತರುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮೂಲಮಾದರಿಯು ಸಿದ್ಧವಾಗಲಿದೆ ಎಂದು ಪಾಂಡೆ ತಿಳಿಸಿದರು.