2024: ಹೂಡಿಕೆದಾರರ ಆತಂಕ, ದಿನದಾಂತ್ಯಕ್ಕೆ ಷೇರುಮಾರುಕಟ್ಟೆಯಲ್ಲಿ ಇಳಿಕೆ ವಿತ್ತ ಸಚಿವರು ಘೋಷಣೆ ಮಾಡಿದ ತೆರಿಗೆ ವಿನಾಯಿತಿಗಳು ಮತ್ತು ಕಸ್ಟಮ್ಸ್ ಸುಂಕ ಕಡಿತಗಳು, ಗ್ರಾಹಕ ಬಳಕೆ ವಸ್ತುಗಳು ಮತ್ತು ಎಫ್‌ಎಂಸಿಜಿ ಷೇರುಗಳ ಮೌಲ್ಯ ಹೆಚ್ಚಿಸಲು ನೆರವಾದವು. ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರ ಬಜೆಟ್ 2024 ಭಾರತೀಯ ಷೇರುಮಾರುಕಟ್ಟೆಯ ಹೂಡಿಕೆಯ ಮೇಲೆ ಪರಿಣಾಮ ಬೀರಿದ್ದು, ಆರಂಭದಲ್ಲಿ 1200 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್ ಬಳಿಕ ಚೇತರಿಸಿಕೊಂಡು 73.04 ಅಂಕಗಳ ಇಳಿಕೆಯಲ್ಲಿ ದಿನದ ವಹಿವಾಟ ಅಂತ್ಯಗೊಳಿಸಿದೆ.ಹೌದು.. ಇಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಮಧ್ಯಾಹ್ನ ಸೆನ್ಸೆಕ್ಸ್ 1200 ಅಂಕಗಳ ಕುಸಿತಗೊಂಡಿತ್ತು. ನಿಫ್ಟಿ ಕೂಡ 435.05 ಅಂಕಗಳ ಕುಸಿದಿತ್ತು. ಬಳಿಕ ಚೆತರಿಸಿಕೊಂಡಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 73.04 ಅಂಕಗಳ ಇಳಿಕೆಯೊಂದಿಗೆ 80,429.04 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 30.20 ಅಂಕಗಳ ಇಳಿಕೆಯೊಂದಿಗೆ 24,479.05 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ 'ಷೇರು ಲಾಭ ತೆರಿಗೆ'ಪ್ರಮುಖವಾಗಿ 2024-25ರ ಬಜೆಟ್‌ನಲ್ಲಿ ಹೂಡಿಕೆದಾರರ 'ಫ್ಯೂಚರ್ಸ್ ಮತ್ತು ಅಪ್ಶನ್ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆಯನ್ನು ಹೆಚ್ಚಿಸಲು ಸರ್ಕಾರವು ಪ್ರಸ್ತಾಪಿಸಿದ್ದು ಮತ್ತು ಈಕ್ವಿಟಿಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ಹೆಚ್ಚಳವು ಮಾರುಕಟ್ಟೆ ಪರಿಣಾಮ ಬೀರಲು ಕಾರಣ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಮಧ್ಯಾಹ್ನ ಸೆನ್ಸೆಕ್ಸ್ 1,277.76 ಮತ್ತು ನಿಫ್ಟಿ 435.05 ಅಂಕಗಳು ಕುಸಿದಿತ್ತು.ಆದರೆ ಬಳಿಕ ವಿತ್ತ ಸಚಿವರು ಘೋಷಣೆ ಮಾಡಿದ ತೆರಿಗೆ ವಿನಾಯಿತಿಗಳು ಮತ್ತು ಕಸ್ಟಮ್ಸ್ ಸುಂಕ ಕಡಿತಗಳು, ಗ್ರಾಹಕ ಬಳಕೆ ವಸ್ತುಗಳು ಮತ್ತು ಎಫ್‌ಎಂಸಿಜಿ ಷೇರುಗಳ ಮೌಲ್ಯ ಹೆಚ್ಚಿಸಲು ನೆರವಾದವು, ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳಲು ಇವು ನೆರವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಸೆನ್ಸೆಕ್ಸ್ ಪ್ಯಾಕ್‌ನಲ್ಲಿ, ಟೈಟಾನ್ ಶೇಕಡಾ 6 ಕ್ಕಿಂತ ಹೆಚ್ಚು ಜಿಗಿಯಿತು, ನಂತರ ಐಟಿಸಿ ಶೇಕಡಾ 5 ಕ್ಕಿಂತ ಹೆಚ್ಚು ಏರಿತು. ಅದಾನಿ ಪೋರ್ಟ್ಸ್, ಎನ್‌ಟಿಪಿಸಿ, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಸನ್ ಫಾರ್ಮಾ ಇತರ ದೊಡ್ಡ ಲಾಭ ಗಳಿಸಿದವು. ಆದಾಗ್ಯೂ, ಲಾರ್ಸೆನ್ ಮತ್ತು ಟೂಬ್ರೊ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖ ಹಿಂದುಳಿದಿವೆ. . :://./XW5Vr5nX8chttps://./# # #Nifty50 # # # # ../wRb97XgUmxಐಟಿಸಿ, ಅದಾನಿ ಪೋರ್ಟ್ ಷೇರುಗಳ ಮೌಲ್ಯ ಹೆಚ್ಚಳಅತ್ತ ಮಾರುಕಟ್ಟೆ ಚೇತರಿಕೆಯಾಗುತ್ತಲೇ ಇತ್ತ ಟೈಟನ್ ಸಂಸ್ಥೆಯ ಷೇರುಗಳು ಬರೊಬ್ಬರಿ ಶೇ.6.56ರಷ್ಟು ಜಿಗಿತ ಕಂಡಿದ್ದು, 213.55 ರೂ ಏರಿಕೆಯೊಂದಿಗೆ 3,468ರೂಗೆ ದರ ಏರಿಕೆಯಾಗಿದೆ.ನಂತರದ ಸ್ಥಾನದಲ್ಲಿ ಐಟಿಸಿ ಷೇರುಗಳು ಇದ್ದು, ಐಟಿಸಿಯ ಷೇರುಗಳ ಮೌಲ್ಯ ಶೇ.6.52, ಅದಾನಿ ಪೋರ್ಟ್ ಷೇರು ಮೌಲ್ಯ ಶೇ.2.77ರಷ್ಟು ಏರಿಕೆಯಾಗಿದೆ. ಉಳಿದಂತೆ ಎನ್ ಟಿಪಿಸಿ, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಹೆಚ್ ಸಿಎಲ್ ಟೆಕ್ನಾಲಜೀಸ್ ಮತ್ತು ಸನ್ ಫಾರ್ಮಾ ಸಂಸ್ಥೆಯ ಷೇರುಗಳ ಮೌಲ್ಯ ಕೂಡ ಏರಿಕೆಯಾಗಿದೆ.ಅಂತೆಯೇ ಎಲ್ ಅಂಡ್ ಟಿ, ಬಜಾಜ್ ಫೈನಾನ್ಸ್, ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ.