ಹಣಕಾಸು ವರ್ಷದಲ್ಲಿ ವಿಸ್ತರಣೆ ಇಲ್ಲ, ಮುದ್ರಾಂಕ ತೆರಿಗೆ ಅವಧಿ 3 ತಿಂಗಳು ವಿಸ್ತರಣೆ 2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಸ್ತರಿಸದ ಕೇಂದ್ರ ಸರ್ಕಾರ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷ ಕೂಡ ಇಂದಿಗೆ(ಮಾರ್ಚ್31) ಮುಕ್ತಾಯವಾಗಲಿದೆ. ನವದೆಹಲಿ: 2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವಿಸ್ತರಿಸದ ಕೇಂದ್ರ ಸರ್ಕಾರ ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷ ಕೂಡ ಇಂದಿಗೆ(ಮಾರ್ಚ್31) ಮುಕ್ತಾಯವಾಗಲಿದೆ.ಈ ಹಿಂದೆ ಪ್ರಸಕ್ತ ಹಣಕಾಸು ವರ್ಷ ಜುಲೈ 1ರಿಂದ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಹಣಕಾಸು ವರ್ಷವನ್ನು ವಿಸ್ತರಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.ಈ ಸಂಬಂಧ ಕಳೆದ ಸಂಜೆ ಗೆಜೆಟೆಡ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮುದ್ರಾಂಕ ತೆರಿಗೆ ದಿನಾಂಕವನ್ನು ಏಪ್ರಿಲ್ 1ರಿಂದ ಜುಲೈ1ಕ್ಕೆ ವಿಸ್ತರಿಸಿದೆ. ಭಾರತೀಯ ಮುದ್ರಾಂಕ ಕಾಯ್ದೆ(ಐಎಸ್ಎ)ಗೆ ತಿದ್ದುಪಡಿ ತಂದಿರುವ ಹಣಕಾಸು ಸಚಿವಾಲಯ ಅದನ್ನು ಜುಲೈ 1ಕ್ಕೆ ಮುಂದೂಡಿದೆ. ಈ ತಿದ್ದುಪಡಿ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.ಕೊರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಣಕಾಸು ವರ್ಷವನ್ನು ಮೂರು ತಿಂಗಳು ವಿಸ್ತರಿಸಬೇಕೆಂದು ಉದ್ಯಮವಲಯಗಳಿಂದ ಕೇಳಿಬಂದಿತ್ತು.