ಟ್ವಿಟರ್ ಲೋಗೋ ಬದಲಾವಣೆ, ನೀಲಿ ಹಕ್ಕಿ ಬದಲಾಗಿ ಬಂತು '' ಹೊಸ ಲೋಗೊ! ಸುಪ್ರಸಿದ್ಧ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ನ 'ನೀಲಿ ಹಕ್ಕಿಯ ಲೋಗೋ ಬದಲಾಗಿದ್ದು, ಹೊಸ ಲೋಗೋ ಕಾಣಿಸಿಕೊಳ್ಳುತ್ತಿದೆ. ನವದೆಹಲಿ: ಸುಪ್ರಸಿದ್ಧ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ನ 'ನೀಲಿ ಹಕ್ಕಿಯ ಲೋಗೋ ಬದಲಾಗಿದ್ದು, ಹೊಸ ಲೋಗೋ ಕಾಣಿಸಿಕೊಳ್ಳುತ್ತಿದೆ. ಈ ಸಂಬಂಧ ಭಾನುವಾರ ತಡರಾತ್ರಿಯೇ ಟ್ವೀಟ್ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮಿನುಗುತ್ತಿರುವ ಚಿತ್ರವನ್ನು ಫೋಸ್ಟ್ ಮಾಡಿದ್ದರು. ../IwcbqMnQtAಕಳೆದ ವರ್ಷವಷ್ಟೇ ಟ್ವಿಟರ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಎಲಾನ್ ಮಸ್ಕ್, ಪ್ಲಾಟ್ ಫಾರ್ಮ್ ನಲ್ಲಿ ಹಲವು ಬದಲಾವಣೆ ಮಾಡುತ್ತಿದ್ದು, 1999ರಲ್ಲಿ ಸ್ಥಾಪಿಸಲಾದ . ಕಂಪನಿಯ ಹೆಸರನ್ನು ಉಲ್ಲೇಖಿಸಿ, ಶೀಘ್ರದಲ್ಲಿಯೇ ಟ್ವಿಟರ್ ಲೋಗೋ ಬದಲಾಗಲಿದೆ ಎಂದು ಹೇಳಿದ್ದರು.ಶೀಘ್ರದಲ್ಲೇ ನಾವು ಟ್ವಿಟರ್ ಬ್ರ್ಯಾಂಡ್ ಮತ್ತು ಎಲ್ಲಾ ಹಕ್ಕಿಗಳಿಗೆ ವಿದಾಯ ಹೇಳುತ್ತೇವೆ ಎಂದು ಎಲಾನ್ ಮಸ್ಕ್ ಇತ್ತೀಚಿಗೆ ಮಾಡಿದ್ದ ಟ್ಲೀಟ್ ಗೆ ಅನೇಕರು ಲೋಗೋವನ್ನು ಬದಲಾಯಿಸಬೇಡಿ ಎಂದು ಕೇಳಿಕೊಂಡಿದ್ದರು.