8 ವಾರಗಳ ಕಾಲ ಶೇ. 50 ರಷ್ಟು ವಿಮಾನ ಕಾರ್ಯ ನಿರ್ವಹಿಸುವಂತೆ ಸ್ಪೈಸ್‍ಜೆಟ್‍ಗೆ ಡಿಜಿಸಿಎ ಆದೇಶ ತಾಂತ್ರಿಕ ದೋಷ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ... ನವದೆಹಲಿ: ತಾಂತ್ರಿಕ ದೋಷ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಆದೇಶಿಸಿದೆ.ಜೂನ್ 19 ರಿಂದ ಕನಿಷ್ಠ ಎಂಟು ಬಾರಿ ತಾಂತ್ರಿಕ ದೋಷ ಘಟನೆಗಳು ವರದಿಯಾದ ನಂತರ ಜುಲೈ 6 ರಂದು ಡಿಜಿಸಿಎ ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿತ್ತು.ಇದನ್ನು ಓದಿ: 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ಶೋಕಾಸ್ ನೊಟೀಸ್!ವಿವಿಧ ಸ್ಪಾಟ್ ಚೆಕ್‍ಗಳು ಮತ್ತು ತಪಾಸಣೆಗಳ ಕುರಿತು ಸ್ಪೈಸ್‍ಜೆಟ್ ನೋಟಿಸ್ ಗೆ ಉತ್ತರ ಸಲ್ಲಿಸಿದ ನಂತರ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಗಾಗಿ ಸ್ಪೈಸ್‍ಜೆಟ್‍ನ ವಿಮಾನ ಹಾರಾಟ ಸಂಖ್ಯೆಯನ್ನು ಶೇ.50ಕ್ಕೆ ನಿರ್ಬಂಧಿಸಲಾಗಿದೆ. ಇದನ್ನು 8 ವಾರಗಳ ಅವಧಿಗೆ ಅನುಮೋದನೆ ನೀಡಲಾಗಿದೆ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.ಸ್ಪೈಸ್ ಜೆಟ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ಸೇವೆ ನೀಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್ ಪ್ರವೃತ್ತಿಯನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಸ್ಪೈಸ್ ಜೆಟ್ ಇನ್ನೂ 8 ವಾರಗಳಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಗಾಗಿ ತನ್ನ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ ಎಂದು ಡಿಜಿಸಿಎ ಹೇಳಿದೆ.