ಇಳಿಕೆಯಾಯ್ತು, ಇನ್ನು ತೈಲೋತ್ಪನ್ನಗಳ ದರ ಏರಿಕೆಗೆ ಸಿದ್ಧರಾಗಿ! ಕಳೆದ ಹಲವು ದಿನಗಳಿಂದ ಇಳಿಕೆಯಾಗುತ್ತಿದ್ದ ತೈಲೋತ್ಪನ್ನಗಳ ದರಗಳ ಸುದ್ದಿ ಕೇಳಿ ನೀವು ಖುಷಿಯಾಗಿರಬಹುದು, ಆದರೆ ಶೀಘ್ರ ನಿಮ್ಮ ಖುಷಿಗೆ ಬ್ರೇಕ್ ಬೀಳಲಿದ್ದು, ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.