ಭಾರತದ ಮಸಾಲೆ ಪದಾರ್ಥಗಳಿಗೆ ನೇಪಾಳ ನಿಷೇಧ! ಸಿಂಗಪುರ್, ಹಾಂಗ್ ಕಾಂಗ್ ಬಳಿಕ ನೇಪಾಳವೂ ಈಗ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದೆ. ಕಠ್ಮಂಡು: ಸಿಂಗಪುರ್, ಹಾಂಗ್ ಕಾಂಗ್ ಬಳಿಕ ನೇಪಾಳವೂ ಈಗ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದೆ. ಭಾರತೀಯ ಬ್ರಾಂಡ್ ಗಳು ತಯಾರಿಸುವ ಮಸಾಲೆ ಪದಾರ್ಥಗಳ ಮಿಶ್ರಣದ ಉತ್ಪನ್ನಗಳನ್ನು ಕಳಪೆ ಗುಣಮಟ್ಟದ ಕಾರಣದಿಂದ ನಿಷೇಧಿಸುತ್ತಿರುವುದಾಗಿ ನೇಪಾಳ ಹೇಳಿದೆ.ಎಂಡಿಹೆಚ್, ಎವರೆಸ್ಟ್ ನ 4 ಉತ್ಪನ್ನಗಳನ್ನು ನೆರೆ ರಾಷ್ಟ್ರದಲ್ಲಿ ನಿಷೇಧಿಸಲಾಗಿದ್ದು, ಈ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಅಥವಾ ಇಟಿಒ ಮಾಲಿನ್ಯಕಾರಕ ಅಂಶಗಳು ಪತ್ತೆಯಾಗಿದೆ.ನೇಪಾಳದಲ್ಲಿ ಮದ್ರಾಸ್ ಕರಿ ಪುಡಿ, ಸಾಂಬಾರ್ ಮಿಶ್ರಿತ ಮಸಾಲೆ ಪುಡಿ; ನ ಮಿಶ್ರ ಮಸಾಲಾ ಕರಿ ಪೌಡರ್ ಮತ್ತು ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.ಆಮದುದಾರರು ಮತ್ತು ವ್ಯಾಪಾರಿಗಳು ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆಹಾರ ಗುಣಮಟ್ಟ ನಿಯಂತ್ರಕ ಒತ್ತಾಯಿಸಿದೆ.ಕಳೆದ ತಿಂಗಳು, ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಲ್ಲಿ ಮತ್ತು ಎವರೆಸ್ಟ್ ಉತ್ಪಾದಿಸಿದ ಕೆಲವು ಮಸಾಲೆಗಳ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಮಟ್ಟ ಹೆಚಿರುವುದು ಪತ್ತೆಯಾದ ಬಳಿಕ ಆ ಉತ್ಪನ್ನಗಳನ್ನು ನಿಷೇಧಿಸಿತ್ತು.