ಐಟಿ ಪೋರ್ಟಲ್ ನಲ್ಲಿ ಪೂರ್ತಿಯಾಗಿ ಬಗೆಹರಿಯದ ಸಮಸ್ಯೆ: 1200 ಬಳಕೆದಾರರೊಡನೆ ಇನ್ಫೋಸಿಸ್ ಸಂಪರ್ಕ ಇದುವರೆಗೂ 3 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಐಟಿ ಪೋರ್ಟಲ್ ಗೆ ಲಾಗಿನ್ ಆಗಿ ಟ್ರಾನ್ಸಾಕ್ಷನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೆಲವರಿಗೆ ಮಾತ್ರ ಸಮಸ್ಯೆಗಳು ಎದುರಾಗುತ್ತಿವೆ. ನವದೆಹಲಿ: ಐಟಿ ಕ್ಷೇತ್ರದ ದಿಗ್ಗಜ, ಆದಾಯ ತೆರಿಗೆ ಜಾಲತಾಣದ ನಿರ್ಮಾತೃ ಸಂಸ್ಥೆ ಇನ್ಫೋಸಿಸ್ ಇನ್ನೂ ಕೆಲ ಬಳಕೆದಾರರು ವೆಬ್ ಪೋರ್ಟಲ್ ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿದೆ. ಆ ಮೂಲಕ ದೇಶದ ಐಟಿ ಪೋರ್ಟಲ್ ಸಮಸ್ಯೆಗೆ ಇನ್ನೂ ಪೂರ್ತಿಯಾಗಿ ಪರಿಹಾರ ಸಿಕ್ಕಿಲ್ಲ ಎನ್ನುವುದು ದೃಢವಾದಂತಾಗಿದೆ. ಇದನ್ನೂ ಓದಿ: ಆರೆಸ್ಸೆಸ್ ಪತ್ರಿಕೆಯಲ್ಲಿ ಇನ್ ಫೋಸಿಸ್ ವಿರುದ್ಧ ಬರಹ: ವಿವಾದದಿಂದ ಅಂತರ ಕಾಯ್ದುಕೊಂಡ ಕೇಸರಿ ಸಂಘಟನೆಜೂನ್ ತಿಂಗಳಲ್ಲಿ ಐಟಿ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅಂದಿನಿಂದ ಬಳಕೆದಾರರು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರು ಸಲ್ಲಿಸುತ್ತಿದ್ದರು. ಇದುವರೆಗೂ 3 ಕೋಟಿಗೂ ಹೆಚ್ಚು ಮಂದಿ ಭಾರತೀಯರು ಐಟಿ ಪೋರ್ಟಲ್ ಗೆ ಲಾಗಿನ್ ಆಗಿ ಟ್ರಾನ್ಸಾಕ್ಷನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕೆಲವರಿಗೆ ಮಾತ್ರ ಸಮಸ್ಯೆಗಳು ಎದುರಾಗುತ್ತಿವೆ.ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್ ಸಮಸ್ಯೆ: ಇನ್ಫೋಸಿಸ್ ಸಿಇಒ- ನಿರ್ಮಲಾ ಸೀತಾರಾಮನ್ ಭೇಟಿಈಗಾಗಲೇ ಇನ್ಫೋಸಿಸ್ ಸಮಸ್ಯೆ ಎದುರಿಸುತ್ತಿರುವ ಸುಮಾರು 1200 ಮಂದಿ ಬಳಕೆದಾರರೊಡನೆ ಸಂಪರ್ಕದಲ್ಲಿದ್ದು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐ-ಟಿ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ: ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್ವಾರದೊಳಗೆ ವ್ಯವಸ್ಥೆ ಸರಿಹೋಗುವ ವಿಶ್ವಾಸವಿದೆ: ಐಟಿ ರಿಟರ್ನ್ಸ್ ವೆಬ್ ಸೈಟ್ ತಾಂತ್ರಿಕ ದೋಷ ಕುರಿತು ಇನ್ಫೋಸಿಸ್ ಹೇಳಿಕೆಕೊರೋನಾ ವಿರುದ್ಧ ಹೋರಾಟಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 100 ಕೋಟಿ ರೂ. ದೇಣಿಗೆಆದಾಯ ತೆರಿಗೆ ಪೋರ್ಟಲ್ ತಾಂತ್ರಿಕ ದೋಷ: ತಡವಾಗಿ ತೆರಿಗೆ ಪಾವತಿಗೆ ದಂಡ ವಿನಾಯಿತಿ ಸಾಧ್ಯತೆ, ಒತ್ತಡದಲ್ಲಿ ಇನ್ಫೋಸಿಸ್