ಕಳೆದ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿರುವುದರಿಂದ ಕಳೆದ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿರುವುದರಿಂದ ಕಳೆದ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ ಪಿ ಹಾಗೂ ಬಿಪಿ ಕಂಪನಿಯ ಬಂಕ್ ಗಳಲ್ಲಿ ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಲಿ, ಇಳಿಕೆಯಾಗಲಿ ಕಂಡುಬಂದಿಲ್ಲ.ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಎಲ್ಲಾ ನಗರಗಳಲ್ಲಿಯೂ ಇಂಧನ ದರ ಸ್ಥಿರವಾಗಿದೆ.ಅಕ್ಟೋಬರ್ 3ರಿಂದ ಸತತ 11ನೇ ದಿನವೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಪೆಟ್ರೋಲ್ ಬೆಲೆ ಕಳೆದ 21 ದಿನಗಳಿಂದ ಸ್ಥಿರವಾಗಿದೆ.ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರ ಬೆಂಗಳೂರಿನಲ್ಲಿ ಪೆಟ್ರೋಲ್ 83.69 ರೂ. ಹಾಗೂ ಡೀಸೆಲ್ 74.63 ರೂ.ದೆಹಲಿಯಲ್ಲಿ ಪೆಟ್ರೋಲ್ 81.06 ರೂ. ಹಾಗೂ ಡೀಸೆಲ್ 70.46 ರೂ.ಮುಂಬೈಯಲ್ಲಿ ಪೆಟ್ರೋಲ್ 87.74 ರೂ. ಹಾಗೂ ಡೀಸೆಲ್ 76.86 ರೂ.ಚೆನ್ನೈನಲ್ಲಿ ಪೆಟ್ರೋಲ್ 84.14 ರೂ. ಹಾಗೂ ಡೀಸೆಲ್ 75.95 ರೂ.