ಜೊಮ್ಯಾಟೋ ಪಾಲಾದ ಉಬರ್ ಈಟ್ಸ್: ಡೀಲ್ ಮೊತ್ತ ಎಷ್ಟು ಗೊತ್ತೇ? ಆಹಾರ ಪೂರೈಕೆ ಉದ್ಯಮ ಉಬರ್ ಈಟ್ಸ್ ನ್ನು ಜೊಮ್ಯಾಟೋ 2,500 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ನವದೆಹಲಿ: ಆಹಾರ ಪೂರೈಕೆ ಉದ್ಯಮ ಉಬರ್ ಈಟ್ಸ್ ನ್ನು ಜೊಮ್ಯಾಟೋ 2,500 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಜ.21 ರಂದು ಜೊಮ್ಯಾಟೋ ಉಬರ್ ಈಟ್ಸ್ ತನ್ನೊಂದಿಗೆ ವಿಲೀನಗೊಂಡಿರುವುದನ್ನು ಖಚಿತಪಡಿಸಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಉಬರ್ ಈಟ್ಸ್ ಆಪ್, ರೆಸ್ಟೊರೆಂಟ್, ಪೂರೈಕೆ (ಡೆಲಿವರಿ) ಪಾಲುದಾರರಿಗೆ ಸಂಬಂಧಪಟ್ಟ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ, ಜೊಮ್ಯಾಟೋಗೆ ವರ್ಗಾವಣೆ ಮಾಡಲಿದೆ. ಭಾರತದ 500 ಕ್ಕೂ ಹೆಚ್ಚು ನಗರಗಳಲ್ಲಿ ಆಹಾರ ಪೂರೈಕೆ ಉದ್ಯಮವನ್ನು ಸ್ಥಾಪಿಸಿದ್ದೇವೆ. ಉಬರ್ ಈಟ್ಸ್ ನ ವಿಲೀನದಿಂದ ನಾವು ಮತ್ತಷ್ಟು ಬಲಿಷ್ಠರಾಗಿದ್ದೇವೆ ಎಂದು ಜೊಮ್ಯಾಟೋ ಸಿಇಒ ಗೋಯಲ್ ಹೇಳಿದ್ದಾರೆ.