ಸುಪ್ರೀಂ ಕೋರ್ಟ್ ಆದೇಶಿಸಿದ್ದ ಮೊತ್ತವನ್ನು ಸಹಾರಾ ಸಂಸ್ಥೆ ಪಾವತಿಸಿಲ್ಲ: ಸೆಬಿ ಮುಖ್ಯಸ್ಥ ಆಗಸ್ಟ್ 2012ರಲ್ಲಿ ಸೆಬಿಗೆ 25,781 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶಿಸಿತ್ತು. ಮುಂಬೈ: ಸುಪ್ರೀಂ ಕೋರ್ಟ್ ಪಾವತಿಸಲು ಆದೇಶಿಸಿದ್ದ ಕೋಟ್ಯಂತರ ಮೊತ್ತವನ್ನು ಸಹಾರಾ ಸಂಸ್ಥೆ ಇನ್ನೂ ಬಾಕಿ ಉಳಿಸಿಕೊಂಡಿದೆ ಎಂದು ಸೆಬಿ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಸಹರಾ ಗ್ರೂಪ್ ನಿಂದ ಹೂಡಿಕೆದಾರರಿಗೆ 62,600 ಕೋಟಿ ರೂ. ಹಣ ಬಾಕಿ: ಸುಪ್ರೀಂ ಕೋರ್ಟ್ ಮೊರೆ ಹೋದ ಸೆಬಿ ಆಗಸ್ಟ್ 2012ರಲ್ಲಿ ಸೆಬಿಗೆ 25,781 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶಿಸಿತ್ತು. ಆದರೆ ಇದುವರೆಗೂ ಸಹಾರಾ 15,000 ಕೋಟಿ ರೂ.ಗಳನ್ನು ಮರಳಿಸಿದೆ.ಇದನ್ನೂ ಓದಿ: ಸೆಬಿ ಆರೋಪಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಹಾರಾ ಪರಿವಾರ್ಸಹಾರಾ ಸಂಸ್ಥೆಯಿಂದ ಹನವನ್ನು ಮರಳಿ ಪಡೆಯಲು ಸೆಬಿ ಯಾವ್ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಧ್ಯದ ಮಂದಿ ಸೆಬಿ ಮುಖ್ಯಸ್ಥ ಅಜಯ್ ತ್ಯಾಗಿಯನ್ನು ಪ್ರಶ್ನಿಸಿದ್ದರು. ಆಗ ತ್ಯಾಗಿ ತಾವು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು: ವಂಚನೆ ಪ್ರಕರಣ; ಸುಮಾರು 10 ಕೋಟಿ ರೂ. ಮೌಲ್ಯದ ಕಾರುಗಳೊಂದಿಗೆ ಆರೋಪಿ ಪರಾರಿ