ಲಾಕ್ ಡೌನ್: ವಾರಂಟಿ, ಉಚಿತ ಸೇವೆ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ವಾರಂಟಿ ಮತ್ತು ಸೇವಾ ಕಾಲನಿಗದಿಯನ್ನು ವಿಸ್ತರಿಸಿದೆ. ನವದೆಹಲಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ಗ್ಯಾರಂಟಿ ಮತ್ತು ಉಚಿತ ಸೇವಾ ಕಾಲ ನಿಗದಿಯನ್ನು ವಿಸ್ತರಿಸಿದೆ.ವಾಹನಗಳ ಉಚಿತ ಸರ್ವಿಸ್, ವಾರಂಟಿಗಳನ್ನು ವಿಸ್ತರಿಸಿದ ಮಾರುತಿ ಸುಜುಕಿ ಮಾರ್ಚ್ 15ರಿಂದ ಏಪ್ರಿಲ್ 30ರ ನಡುವಿನ ಸೇವೆಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.ಈ ಮಧ್ಯೆ ಕಂಪೆನಿಯ ಷೇರುಗಳು ಇಂದಿನ ವಹಿವಾಟಿನಲ್ಲಿ ಇಳಿಕೆ ಕಂಡುಬಂದಿದೆ.