ಟಾಟಾ ಸ್ಟೀಲ್‌ನಿಂದ ಮಹತ್ವದ ನಿರ್ಧಾರ: ಕೊರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ! ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ. ನವದೆಹಲಿ: ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ. ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕಂಪನಿಯ ನೌಕರನ ಕುುಟಂಬಕ್ಕೆ ಮುಂದಿನ 60 ವರ್ಷದ ತನಕ ವೇತನ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಟಾಟಾ ಸ್ಟೀಲ್ ಸುತ್ತೋಲೆ ಹೊರಡಿಸಿದೆ. ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಕೊರೋನಾದಿಂದ ನೌಕರ ಮೃತಪಟ್ಟರೆ ಈ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ. ವೇತನದ ಜೊತೆಗೆ ಮೆಡಿಕಲ್ ಸೌಲಭ್ಯಗಳು, ಹೌಸಿಂಗ್ ಫೆಸಿಲಿಟಿ ಮತ್ತು ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ ವೆಚ್ಚವನ್ನೂ ಕಂಪನಿ ಭರಿಸಲಿದೆ.# # #COVID19. , . ../AK3TDHyf0H