ಅಕ್ರಮವಾಗಿ 263 ಕೋಟಿ ರೂ. ಟಿಡಿಎಸ್ ರಿಫಂಡ್: ಹಿಂದಿ ಕಿರುತೆರೆ ನಟಿ ಕೀರ್ತಿ ವರ್ಮಾ ವಿರುದ್ಧ ಚಾರ್ಜ್ ಶೀಟ್ 'ರೋಡೀಸ್' ಮತ್ತು 'ಬಿಗ್ ಬಾಸ್ ಸೀಸನ್ 12'ರಲ್ಲಿ ಕಾಣಿಸಿಕೊಂಡಿದ್ದ ಆದಾಯ ತೆರಿಗೆ ಅಧಿಕಾರಿ ಹಾಗೂ ಹಿಂದಿ ಕಿರುತೆರೆ ನಟಿ ಕೀರ್ತಿ ವರ್ಮಾ ಅವರ ವಿರುದ್ಧ ಅಕ್ರಮವಾಗಿ 263 ಕೋಟಿ ಟಿಡಿಎಸ್ ಮರುಪಾವತಿ ಪಡೆದ ಆರೋಪದ ಮೇಲೆ ಜಾರಿ... ನವದೆಹಲಿ: 'ರೋಡೀಸ್' ಮತ್ತು 'ಬಿಗ್ ಬಾಸ್ ಸೀಸನ್ 12'ರಲ್ಲಿ ಕಾಣಿಸಿಕೊಂಡಿದ್ದ ಆದಾಯ ತೆರಿಗೆ ಅಧಿಕಾರಿ ಹಾಗೂ ಹಿಂದಿ ಕಿರುತೆರೆ ನಟಿ ಕೀರ್ತಿ ವರ್ಮಾ ಅವರ ವಿರುದ್ಧ ಅಕ್ರಮವಾಗಿ 263 ಕೋಟಿ ಟಿಡಿಎಸ್ ಮರುಪಾವತಿ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಚಾರ್ಜ್ ಶೀಟ್ ಸಲ್ಲಿಸಿದೆ.ಮಂಗಳವಾರ ಮುಂಬೈ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ಕೀರ್ತಿ ವರ್ಮಾ ಸೇರಿದಂತೆ ಇತರ 14 ಮಂದಿಯನ್ನು ಹೆಸರಿಸಲಾಗಿದೆ.ಆದಾಯ ತೆರಿಗೆ ಇಲಾಖೆ ಮಾಜಿ ಇನ್ಸ್‌ಪೆಕ್ಟರ್ ತಾನಾಜಿ ಮಂಡಲ್ ಅಧಿಕಾರಿ, ಭೂಷಣ್ ಅನಂತ್ ಪಾಟೀಲ್, ರಾಜೇಶ್ ಶೆಟ್ಟಿ ಮತ್ತು ಇತರರ ವಿರುದ್ಧವೂ ಚಾರ್ಜ್ ಶೀಟ್‌ ಸಲ್ಲಿಸಲಾಗಿದೆ.ತೆರಿಗೆ ಮರುಪಾವತಿಯನ್ನು ಅಕ್ರಮವಾಗಿ ಪಡೆದ ವ್ಯಕ್ತಿಯೊಂದಿಗೆ ಕೀರ್ತಿ ವರ್ಮಾ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಇಡಿ ಆರೋಪಿಸಿದೆ.ಇದನ್ನು ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಇಡಿ ಕಸ್ಟಡಿ ಸೆ.14 ರವರೆಗೆ ವಿಸ್ತರಣೆವರ್ಮಾ ಅವರು 2021 ರಲ್ಲಿ ಇಡಿ ವಶಪಡಿಸಿಕೊಂಡ ಗುರುಗ್ರಾಮ್‌ನಲ್ಲಿರುವ ಆಸ್ತಿಯನ್ನು 1.02 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಮತ್ತು ಮಾರಾಟದ ಆದಾಯವನ್ನು ಅವರ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸಿರುವುದನ್ನು ಇಡಿ ಪತ್ತೆ ಮಾಡಿದೆ.ಜನವರಿಯಲ್ಲಿ ವರ್ಮಾ ಮತ್ತು ಇತರ ಆರೋಪಿಗಳಾದ ಪಾಟೀಲ್ ಮತ್ತು ಶೆಟ್ಟಿ ಅವರ ಹೆಸರಿನಲ್ಲಿ ಖರೀದಿಸಲಾದ ಭೂಮಿ, ಫ್ಲ್ಯಾಟ್‌ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ 69 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ತಾನಾಜಿ ಮಂಡಲ್ ಅಧಿಕಾರಿ ಮತ್ತು ಪಾಟೀಲ್ ವಿರುದ್ಧ ಕೇಸ್ ದಾಖಲಿಸಿದೆ.