ಲಾಕ್ ಡೌನ್ ಉಲ್ಲಂಘನೆ: ಡಿಹೆಚ್ ಎಲ್ ಎಫ್ ಪ್ರವರ್ತಕ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಬಂಧನ, ಕೇಸು ದಾಖಲು ಕೋವಿಡ್-19 ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಪ್ರಯಾಣ ಮಾಡಿದ ಆರೋಪದ ಮೇಲೆ ಡಿಹೆಚ್ ಎಲ್ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಮತ್ತು 21 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಮುಂಬೈ: ಕೋವಿಡ್-19 ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಪ್ರಯಾಣ ಮಾಡಿದ ಆರೋಪದ ಮೇಲೆ ಡಿಹೆಚ್ ಎಲ್ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಮತ್ತು 21 ಮಂದಿ ವಿರುದ್ಧ ಕೇಸು ದಾಖಲಾಗಿದೆ.ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಉಲ್ಲಂಘನೆ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಹಾಬಲೇಶ್ವರ ಹತ್ತಿರವಿರುವ ಫಾರ್ಮ್ ಹೌಸ್ ದಿವಾನ್ ವಿಲ್ಲಾದಿಂದ ವಾಧವಾನ್ಸ್ ಅವರ ಕುಟುಂಬಸ್ಥರ ಜೊತೆ ಬಂಧಿಸಲಾಗಿತ್ತು. ಈ ಖ್ಯಾತ ಪರ್ವತ ಪ್ರದೇಶ ಮುಂಬೈಯಿಂದ ಸುಮಾರು 300 ಕಿಲೋ ಮೀಟರ್ ದೂರದಲ್ಲಿದೆ.ಲಾಕ್ ಡೌನ್ ಘೋಷಣೆಯಾಗಿದ್ದರೂ ಕೂಡ ಎಲ್ಲಾ 23 ಮಂದಿ ಖಂಡಾಲಾದಿಂದ ಮಹಾಬಲೇಶ್ವರಕ್ಕೆ ಕಳೆದ ಬುಧವಾರ ಸಂಜೆ ತಮ್ಮ ಕಾರಿನಲ್ಲಿ ಹೋಗಿದ್ದರು ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇವರು ಯಾವುದೇ ಅನುಮತಿ ಪಡೆಯದೆ ಮತ್ತು ತುರ್ತು ಕೆಲಸಗಳಿಲ್ಲದೆ ಪ್ರಯಾಣ ಮಾಡಿದ್ದರು ಎಂದು ಹೇಳಲಾಗಿದೆ.ಎಲ್ಲಾ 23 ಮಂದಿಯನ್ನು ಸದ್ಯ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು ತನಿಖೆ ನಡೆಯುತ್ತಿದೆ. ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಯೆಸ್ ಬ್ಯಾಂಕ್ ಮತ್ತು ಡಿಎಚ್ಎಲ್ ಎಫ್ ಅಕ್ರಮ ಕೇಸಿನ ಆರೋಪಿಗಳಾಗಿದ್ದಾರೆ.