ಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ. ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು. ಬೆಂಗಳೂರು: ಬಹುನಿರೀಕ್ಷಿತ ಜಿಯೊಫೋನ್ ನೆಕ್ಸ್ಟ್ ಈ ಬಾರಿ ದೀಪಾವಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಮತ್ತು ಗೂಗಲ್ ಸಂಸ್ಥೆ ಜಂಟಿ ಪ್ರಕಟಣೆ ಹೊರಡಿಸಿದೆ. ಈ ನೂತನ ಫೋನ್ ಬೆಲೆ 6,499 ರೂ. ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಸಂಸ್ಥೆ ನೀಡಿದೆ. ಒಂದೇ ಸಲಕ್ಕೆ ಆರೂವರೆ ಸಾವಿರ ರೂ. ತೆರಲು ಶಕ್ತರಲ್ಲದವರು ಕಂತಿನಲ್ಲಿ ಈ ಮೊಬೈಲ್ ಖರೀದಿಸಬಹುದು.ಇದನ್ನೂ ಓದಿ: ಜಿಯೊ ಫೋನ್ ಗಾಗಿ ಜಿಯೊ- ಗೂಗಲ್ ಜಂಟಿಯಾಗಿ ಪ್ರಗತಿ ಓಎಸ್ ಅಭಿವೃದ್ಧಿ1,999 ರೂ. ಡೌನ್ ಪೇಮಂಟ್ ಕೊಟ್ಟು 18- 24 ತಿಂಗಳುಗಳ ಕಾಲ ಉಳಿದ ಹಣವನ್ನು ಕಂತು ಕಟ್ಟಬಹುದು. ಏಂಟ್ರಿ ಲೆವೆಲ್ ಮೊಬೈಲ್ ಕೆಟಗರಿಯಲ್ಲಿ ಕಂತು ಸೌಲಭ್ಯ ಸ್ಮಾರ್ಟ್ ಫೋನ್ ಲಭ್ಯವಾಗುತ್ತಿರುವುದು ಇದೇ ಮೊದಲು ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಈ ಮೊಬೈಲ್ ಕ್ವಾಲ್ ಕಾಂ ಚಿಪ್ ಸೆಟ್ ಹೊಂದಿದ್ದು, ಟಾಕ್ ಟೈಮ್ ಮತ್ತು ಡೇಟಾ ಪ್ಯಾಕೇಜ್ ಸಹಿತ ಒಳಗೊಳ್ಳಲಿದೆ. ಮೊಬೈಲ್ ಆಪರೇಟಿಂಗ್ ಸಿಸ್ಟಂ ಪ್ರಗತಿ ಯನ್ನು ಜಿಯೊ ಮತ್ತು ಗೂಗಲ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ.ಇದನ್ನೂ ಓದಿ: 'ಹೈಸ್ಪೀಡ್ ಇಂಟರ್ನೆಟ್'; ಜೂನ್‍ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆದಿನವೊಂದಕ್ಕೆ 27 ಕೋಟಿ ದಾನ ಮಾಡಿ, ದೇಶದ ಅತ್ಯುನ್ನತ ಉದಾರಿ ಉದ್ಯಮಿಯಾದ ಅಜಿಂ ಪ್ರೇಂ ಜಿ!ಮುಂದಿನ ಮೂರು ವರ್ಷಗಳಿಗೆ ಆರ್ ಬಿ ಐ ಗವರ್ನರ್ ಆಗಿ ಶಕ್ತಿ ಕಾಂತ್ ದಾಸ್ ಮರು ನೇಮಕಮತ್ತೆ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ: ಇಂದಿನ ದರ ಪಟ್ಟಿ ಇಂತಿದೆಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!