: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ! ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ. ಮುಂಬೈ: ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರ ಮತ್ತು ಹಬ್ಬದ ದಿನ ಮಂಗಳವಾರ ಅಂದರೆ ನಿನ್ನೆ ಅಲ್ಪ ಪ್ರಮಾಣದಲ್ಲಿ ದರ ಏರಿಕೆಯಾಗಿತ್ತು. ಇದೀಗ ಸತತ ಮೂರನೇ ದಿನವೂ ಹಳದಿ ಲೋಹದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.22 ಕ್ಯಾರಟ್‌ ಚಿನ್ನದ ದರದಲ್ಲಿ 35 ರೂ ಏರಿಕೆಯಾಗಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 38 ರೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನ 6,610ರೂ ಇದ್ದು, 24 ಕ್ಯಾರಟ್ ಚಿನ್ನದರ 7,211 ರೂ ಇದೆ.ಬೆಳ್ಳಿ ದರವೂ ಏರಿಕೆಇತ್ತ ಚಿನ್ನ ಮಾತ್ರವಲ್ಲದೇ ಬೆಳ್ಳಿ ದರದಲ್ಲೂ ಸತತ ಏರಿಕೆ ಕಂಡುಬರುತ್ತಿದ್ದು, ಇಂದು ಒಂದು ಗ್ರಾಂ ಬೆಳ್ಳಿಯ ( ) ಬೆಲೆಯಲ್ಲಿ ಒಂದು ರೂ ಹೆಚ್ಚಳವಾಗಿ 83.75 ರೂಗೆ ಏರಿಕೆಯಾಗಿದೆ.