ದೇಶದ 72 ನಗರಗಳಲ್ಲಿ ಈಗ ಜಿಯೊ 5ಜಿ ಸೇವೆ ಲಭ್ಯ ಇನ್ನೂ ನಾಲ್ಕು ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿಕೊಂಡಿರುವ ರಿಲಯನ್ಸ್ ಜಿಯೊ ಈ ಸೇವೆ ವೇಗಗತಿಯಲ್ಲಿ ಭಾರತದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಹೇಳಿದೆ. ಮುಂಬೈ: ಇನ್ನೂ ನಾಲ್ಕು ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿಕೊಂಡಿರುವ ರಿಲಯನ್ಸ್ ಜಿಯೊ ಈ ಸೇವೆ ವೇಗಗತಿಯಲ್ಲಿ ಭಾರತದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಹೇಳಿದೆ. ಇಂದು ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿ ಪಟ್ಟಣಗಳಲ್ಲಿ 5ಜಿ ಸೇವೆಯನ್ನು ವಿಸ್ತರಿಸಿಕೊಳ್ಳಲಾಗಿದ್ದು ಈ ಮೂಲಕ ಇದುವರೆಗೆ 5ಜಿ ಸೇವೆ ದೇಶದ 72 ನಗರಗಳಿಗೆ ಲಭ್ಯವಾಗಿದೆ.ಬೇರೆ ನಗರಗಳ ಜಿಯೊ ಬಳಕೆದಾರರಿಗೆ ಜಿಯೊ ವೆಲ್ ಕಮ್ ಆಫರ್ ನ್ನು ನೀಡಲಾಗುತ್ತಿದ್ದು ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್ ವೇಗದಕ್ಕೆ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತಿ ಡಾಟಾ ನೀಡಲಾಗುವುದು ಎಂದು ಕಂಪೆನಿ ಹೇಳಿದೆ.ಜಿಯೊ, 5ನೇ ತಲೆಮಾರಿನ ಮೊಬೈಲ್ ವ್ಯವಸ್ಥೆ(5G)ಯನ್ನು ದೆಹಲಿ, ಮುಂಬೈ, ವಾರಣಾಸಿ ಮತ್ತು ಕೋಲ್ಕತ್ತಾದಲ್ಲಿ ಅಕ್ಟೋಬರ್ 4ರಂದು ಆರಂಭಿಸಿತ್ತು. ಅಕ್ಟೋಬರ್ 22ರಂದು ಚೆನ್ನೈ ಮತ್ತು ನತದ್ವಾರದಲ್ಲಿ ಆರಂಭವಾಗಿದ್ದವು. ಇದನ್ನೂ ಓದಿ: ಏಪ್ರಿಲ್ 2024ರ ವೇಳೆಗೆ ದೇಶದಲ್ಲಿ ಬಿಎಸ್ಎನ್ಎಲ್ 5ಜಿ ಸೇವೆ ಆರಂಭ: ಅಶ್ವಿನಿ ವೈಷ್ಣವ್ನಂತರ ನವೆಂಬರ್ 10ರಂದು ಬೆಂಗಳೂರು ಮತ್ತು ಹೈದರಾಬಾದ್, ನಂತರ ಗುರುಗ್ರಾಮ್, ನೊಯ್ಡಾ, ಗಾಝಿಯಾಬಾದ್, ಫರಿದಾಬಾದ್ ಗಳಲ್ಲಿ ನಂತರದ ದಿನಗಳಲ್ಲಿ ಜಾರಿಗೆ ಬಂದವು. ಪುಣೆಯಲ್ಲಿ ನವೆಂಬರ್ 23ರಂದು ಹಾಗೂ ಗುಜರಾತ್ ನ 33 ಜಿಲ್ಲೆಗಳಲ್ಲಿ ನವೆಂಬರ್ 25ರಂದು ಬಿಡುಗಡೆಯಾದವು. ನಂತರದ ದಿನಗಳಲ್ಲಿ ಹಲವು ನಗರಗಳಲ್ಲಿ 5ಜಿ ಸೇವೆಯನ್ನು ಜಿಯೊ ಬಿಡುಗಡೆ ಮಾಡುವುದರೊಂದಿಗೆ ಪ್ರಸ್ತುತ 72 ನಗರಗಳಿಗೆ ವಿಸ್ತರಿಸಿದೆ.