ಕರ್ನಾಟಕ ವಲಯದ ಇಪಿಎಫ್ಒ ಹೆಚ್ಚುವರಿ ಆಯುಕ್ತರಾಗಿ ರಾಧಾ ಕ್ರಿಶನ್ ಅಧಿಕಾರ 1994 ಬ್ಯಾಚ್ ನ ಇಪಿಎಫ್ಒ ಅಧಿಕಾರಿ ಶ್ರೀ. ರಾಧಾ ಕ್ರಿಶನ್ ಅವರನ್ನು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಹುದ್ದೆಗೆ ಬಡ್ತಿ ನೀಡಿ... ಬೆಂಗಳೂರು: 1994 ಬ್ಯಾಚ್ ನ ಇಪಿಎಫ್ಒ ಅಧಿಕಾರಿ ಶ್ರೀ. ರಾಧಾ ಕ್ರಿಶನ್ ಅವರನ್ನು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ) ಹುದ್ದೆಗೆ ಬಡ್ತಿ ನೀಡಿ, ಬೆಂಗಳೂರು 560013 ರಲ್ಲಿ ಪ್ರಧಾನ ಕಚೇರಿ ಹೊಂದಿರುವ, ಕರ್ನಾಟಕ & ಗೋವಾ ವಲಯಕ್ಕೆ ನೇಮಿಸಲಾಗಿದೆ. 01.01.2019 ರಿಂದ ಅವರು ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಪ್ರಧಾನ ಕಚೇರಿ), ಕರ್ನಾಟಕ & ಗೋವಾ ವಲಯ, ಅಧಿಕಾರ ವಹಿಸಿಕೊಂಡಿರುತ್ತಾರೆ. ಇದಕ್ಕೂ ಮುಂಚೆ ಅವರು ಸಹಾಯಕ ಪಿಎಫ್ ಆಯುಕ್ತ, ಪ್ರಾದೇಶಿಕ ಪಿಎಫ್ ಆಯುಕ್ತ-2, ಪ್ರಾದೇಶಿಕ ಪಿಎಫ್ ಆಯುಕ್ತ-1 ಮತ್ತು ಹೆಚ್ಚುವರಿ ಕೇಂದ್ರ ಪಿಎಫ್ ಆಯುಕ್ತರಾಗಿ ದೇಶದ ವಿವಿಧೆಡೆ ಕಾರ್ಯ ನಿರ್ವಹಿಸಿರುತ್ತಾರೆ.