ಚಿನ್ನದ ಬೆಲೆ ಭಾರೀ ಏರಿಕೆ: ಇಂದಿನ ದರ ಇಂತಿದೆ ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ. ಬೆಂಗಳೂರು: ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.ಹೌದು.. ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ಬೆಲೆ ಗುರುವಾರ (ಮಾರ್ಚ್‌ 14) ಏರಿಕೆ ( ) ಕಂಡಿದೆ.ಬೆಂಗಳೂರಿನಲ್ಲಿ ( ) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು, 24 ಕ್ಯಾರಟ್‌ನ ಚಿನ್ನದ ಬೆಲೆಯು 27 ರೂ. ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರಟ್‌ನ ಗ್ರಾಂ ಚಿನ್ನಕ್ಕೆ 6,060 ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದರ 6,611 ರೂ. ಆಗಿದೆಬೆಂಗಳೂರಿನಲ್ಲಿ ಬುಧವಾರ (ಮಾರ್ಚ್‌ 13) ಚಿನ್ನದ ಬೆಲೆ ಇಳಿಕೆಯಾಗಿತ್ತು. ಪ್ರತಿ ಗ್ರಾಂ 22 ಕ್ಯಾರಟ್‌ ಚಿನ್ನಕ್ಕೆ 39 ರೂ. ಹಾಗೂ 24 ಕ್ಯಾರಟ್‌ಗೆ 42 ರೂ. ಇಳಿಕೆಯಾಗಿತ್ತು. ಮಂಗಳವಾರ (ಮಾರ್ಚ್‌ 12) ಕೇವಲ ಒಂದು ರೂ. ಇಳಿಕೆಯಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಇಂದು ಕೂಡ ಬೆಳ್ಳಿಯ ಬೆಲೆಯು ಒಂದು ಗ್ರಾಂಗೆ 74.50 ರೂ. ಇದೆ.