ತನ್ನ ಒಂದೂವರೆ ಲಕ್ಷ ಚಾಲಕರ ಲಸಿಕೆಗಾಗಿ ನಗದು ಪ್ರೋತ್ಸಾಹ ಧನ ಪ್ರಕಟಿಸಿದ ಉಬರ್! ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ ಧನವನ್ನು ಉಬರ್ ಕಂಪನಿ ಶುಕ್ರವಾರ ಪ್ರಕಟಿಸಿದೆ. ಬೆಂಗಳೂರು: ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ ಧನವನ್ನು ಉಬರ್ ಕಂಪನಿ ಶುಕ್ರವಾರ ಪ್ರಕಟಿಸಿದೆ.ಎರಡು ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಕಾರು, ಆಟೋ ಮತ್ತು ಮೋಟೋ ಚಾಲಕರು ಮಾನ್ಯಗೊಂಡ ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತೋರಿಸಿದರೆ 400 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.ನಮ್ಮ ಎಲ್ಲಾ ಉತ್ಪನ್ನಗಳ ಮಾರ್ಗಗಳಲ್ಲಿನ ಡ್ರೈವರುಗಳಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಮತ್ತು ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುವುದು ಎಂದು ಉಬರ್ ಇಂಡಿಯಾ ದಕ್ಷಿಣ ಏಷ್ಯಾ ಡ್ರೈವರ್ ಆಫರೇಷನ್ ಮತ್ತು ಸಪ್ಲೈ ಮುಖ್ಯಸ್ಥ ಪವನ್ ವೈಶ್ ಹೇಳಿದ್ದಾರೆ.