ಬದರಿನಾಥ್, ಕೇದಾರನಾಥ ದೇವಸ್ಥಾನಗಳಿಗೆ ಮುಕೇಶ್ ಅಂಬಾನಿ ಭೇಟಿ, 5 ಕೋಟಿ ರೂ. ದೇಣಿಗೆ ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಅಂಬಾನಿ ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ... ಬದರಿನಾಥ್: ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಅಂಬಾನಿ ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಗುರುವಾರ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ ಮತ್ತು ಕೇದಾರನಾಥ ದೇವಸ್ಥಾನಗಳಿಗೆ ಭೇಟಿ ನೀಡಿದರು.ವರದಿಗಳ ಪ್ರಕಾರ, ಅಂಬಾನಿ ಅವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಂಟಿ ಸಮಿತಿಯಾದ ಬದ್ರಿ-ಕೇದಾರ ದೇವಾಲಯ ಸಮಿತಿ()ಗೆ 5 ಕೋಟಿ ದೇಣಿಗೆ ನೀಡಿದ್ದಾರೆ.ಇದನ್ನು ಓದಿ: ಕೇರಳ: ಗುರುವಾಯೂರು ದೇವಾಲಯಕ್ಕೆ ಮುಕೇಶ್ ಅಂಬಾನಿ ಭೇಟಿ: 1.5 ಕೋಟಿ ರೂಪಾಯಿ ದೇಣಿಗೆ!ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ವೀಡಿಯೊದಲ್ಲಿ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಬದರಿನಾಥ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯದ ಅಧಿಕಾರಿಗಳು ಕೈಗಾರಿಕೋದ್ಯಮಿಯೊಂದಿಗೆ ನಡೆದುಕೊಂಡು ಹೋಗುತ್ತಿರುವುದು ದೃಶ್ಯ ಕಂಡುಬಂದಿದೆ.ಮುಖೇಶ್ ಅಂಬಾನಿ ಅವರು ಕಳೆದ ತಿಂಗಳು ತಿರುಪತಿಗೆ ಹಾಗೂ ಕೇರಳದ ಪ್ರಸಿದ್ಧ ದೇವಾಲಯ ಗುರುವಾಯೂರು ದೇವಾಲಯಕ್ಕೂ ಭೇಟಿ ನೀಡಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದರು.# | . . 5 - () ../DTrX4eCPvv