ತೈಲೋತ್ಪನ್ನಗಳ ಬೆಲೆ ಸತತ ಏರಿಕೆ, ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಗುರುವಾರ ಮತ್ತೆ ಏರಿಕೆಯಾಗಿದ್ದು, ತಲಾ 35 ಪೈಸೆ ಇಂದು ಏರಿಕೆಯಾಗಿದೆ. ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಗುರುವಾರ ಮತ್ತೆ ಏರಿಕೆಯಾಗಿದ್ದು, ತಲಾ 35 ಪೈಸೆ ಇಂದು ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ದೇಶಾದ್ಯಂತ ಇಂಧನ ದರವನ್ನು ಸತತವಾಗಿ ಹೆಚ್ಚಳ ಮಾಡುತ್ತಾ ಬಂದಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ 112 ರೂಪಾಯಿ 44 ಪೈಸೆಯಾಗಿದ್ದು, ಡೀಸೆಲ್ ಬೆಲೆ 103 ರೂಪಾಯಿ 26 ಪೈಸೆಯಾಗಿದೆ.ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 106 ರೂಪಾಯಿ 54 ಪೈಸೆ ಮತ್ತು ಡೀಸೆಲ್ ಬೆಲೆ 95 ರೂಪಾಯಿ 27 ಪೈಸೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 110 ರೂಪಾಯಿ 25 ಪೈಸೆಯಾದರೆ, ಪ್ರತೀ ಲೀಟರ್ ಡೀಸೆಲ್ ದರ 101 ರೂಪಾಯಿ 12 ಪೈಸೆಗೆ ಏರಿಕೆಯಾಗಿದೆ. & # 106.54 ( 0.35) & 95.27 ( 0.35) . & - 112.44 & 103.26 #, 107.12 & 98.38 #; 103.61 & 99.59 ../oxu6ONvNUU