ನೌಕರರ ಭವಿಷ್ಯ ನಿಧಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬೇಕೆ, ಆನ್ ಲೈನ್ ನಲ್ಲಿ ಹೀಗೆ ಮಾಡಿ ನೌಕರರ ಭವಿಷ್ಯ ನಿಧಿಯ ನಿವೃತ್ತಿ ಉಳಿತಾಯ ಖಾತೆಯಿಂದ ಒಂದು ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ. ನೌಕರರ ಭವಿಷ್ಯ ನಿಧಿಯ ನಿವೃತ್ತಿ ಉಳಿತಾಯ ಖಾತೆಯಿಂದ ಒಂದು ಭಾಗವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕಾರ್ಮಿಕ ಇಲಾಖೆ ಸೂಚನೆ ಹೊರಡಿಸಿದೆ. ಅದರ ಪ್ರಕಾರ ನೌಕರರ ಭವಿಷ್ಯ ನಿಧಿ ಹೊಂದಿರುವ ನೌಕರರು ತಮ್ಮ ಮೂರು ತಿಂಗಳ ಮೂಲ ಆದಾಯ ಮತ್ತು ತುಟ್ಟಿ ಭತ್ಯೆಯನ್ನು ಸೇರಿಸಿದಾಗ ಆಗುವ ಮೊತ್ತದಷ್ಟು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.ಪ್ರಧಾನ ಮಂತ್ರಿಗಳು ಕಳೆದ ತಿಂಗಳು 24ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಸಾಂಕ್ರಾಮಿಕ ರೋಗ ಕಾಯ್ದೆಯ ಅಡಿ ಪಿಂಚಣಿ ನಿಧಿಯನ್ನು ವಿತ್ ಡ್ರಾ ಮಾಡಿಕೊಡಬೇಕೆಂದು ಹಲವು ಮನವಿಗಳು ಬಂದವು. ನೌಕರರು ಆಧಾರ್ ಸಂಖ್ಯೆಯನ್ನು ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಜೊತೆ ಜೋಡಣೆ ಮಾಡಿಕೊಂಡಿದ್ದರೆ ಆನ್ ಲೈನ್ ನಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದು.ಆನ್ ಲೈನ್ ನಲ್ಲಿ ವಿತ್ ಡ್ರಾ ಮಾಡಿಕೊಳ್ಳುವ ಮೊದಲು ಈ ಕೆಲಸ ಮಾಡಿರಬೇಕು:ನಿಮ್ಮ ಯುಎಎನ್ ಸಕ್ರಿಯವಾಗಿರಬೇಕು.ಆಧಾರ್ ಸಂಖ್ಯೆ ಯುಎಎನ್ ಜೊತೆ ಜೋಡಣೆಯಾಗಿರಬೇಕು.ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಐಎಫ್ಎಸ್ ಸಿ ಜೊತೆ ಯುಎಎನ್ ಗೆ ಜೋಡಣೆಯಾಗಿರಬೇಕು.ಯುಎಎನ್ ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ ಹೀಗೆ ಮಾಡಿ:...inವೆಬ್ ಸೈಟ್ ತೆರೆಯಿರಿ.ಅದರಲ್ಲಿ ಕ್ಲಿಕ್ ಮಾಡಿ ನಂತರ ಫಾರ್ ಎಂಪ್ಲಾಯಿಸ್ ಎಂದು ಕ್ಲಿಕ್ ಮಾಡಿ.ನಂತರ ಅದರಲ್ಲಿ ‘ / servicesಗೆ ಕ್ಲಿಕ್ ಮಾಡಿ. ಅದರಲ್ಲಿ ಯುಎಎನ್ ಸದಸ್ಯ ಪೋರ್ಟಲ್ ಗೆ ಹೋಗುತ್ತದೆ.ಪುಟ ತೆರೆದಾಗ ನಿಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿ ಎಂದು ಕೇಳುತ್ತದೆ. ಬಲಬದಿಯಲ್ಲಿ ಪ್ರಮುಖ ಸಂಪರ್ಕದಲ್ಲಿ ಅದು ಸಿಗುತ್ತದೆ.ಅಲ್ಲಿ ಸಂಬಂಧಪಟ್ಟ ಅಗತ್ಯ ವಿವರಗಳನ್ನು ನೀಡಿ ಆಯ್ಕೆಯನ್ನು ಒತ್ತಿ.ನಂತರ ನಿಮಗೆ ಮೊಬೈಲ್ ನಲ್ಲಿ ಒಟಿಪಿ ಸಂಖ್ಯೆ ಸಿಗುತ್ತದೆ.ಒಟಿಪಿ ಸಂಖ್ಯೆ ದಾಖಲು ಮಾಡಿ.ಕೊನೆಗೆ ಎಂದು ಕ್ಲಿಕ್ ಮಾಡಿಆಗ ನೀವು ಯುಎಎನ್ ಯನ್ನು ಸಕ್ರಿಯಗೊಳಿಸಿದ್ದೀರಿ ಎಂದರ್ಥ. # # # # ../qrw5ATUB6Kಪ್ರಾವಿಡೆಂಟ್ ಫಂಡ್ ನ್ನು ನಿಮ್ಮ ಖಾತೆಯಿಂದ ವಿತ್ ಡ್ರಾ ಮಾಡುವುದು ಹೇಗೆ: ' ' # # # # ../BsO50EdRuV