ಬೆಂಗಳೂರು: ಬೈಜೂಸ್ ಸಿಇಒ ಕಚೇರಿ, ನಿವಾಸದ ಮೇಲೆ ಇಡಿ ದಾಳಿ ಎಜುಟೆಕ್‌ ಕಂಪನಿ ಬೈಜೂಸ್ ಸಿಇಒ ರವೀಂದ್ರನ್ ಬೈಜು ಅವರ ಬೆಂಗಳೂರಿನ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ನಡೆಸಲಾಗಿದೆ. ಬೆಂಗಳೂರು: ಎಜುಟೆಕ್‌ ಕಂಪನಿ ಬೈಜೂಸ್ ಸಿಇಒ ರವೀಂದ್ರನ್ ಬೈಜು ಅವರ ಬೆಂಗಳೂರಿನ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ನಡೆಸಲಾಗಿದೆ.ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ತನಿಖೆಯ ಭಾಗವಾಗಿ 'ದೋಷಪೂರಿತ' ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ನಿಬಂಧನೆಗಳ ಅಡಿಯಲ್ಲಿ ಒಟ್ಟು ಮೂರು ಕಡೆ, ಎರಡು ಕಚೇರಿ ಮತ್ತು ಒಂದು ನಿವಾಸದ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.ದಾಳಿ ವೇಳೆ ವಿವಿಧ ದೋಷಾರೋಪಣೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ.ಇದನ್ನು ಓದಿ: 80.3 ಕೋಟಿ ರೂ ಮೌಲ್ಯದ ಆಪಲ್ ಐಪ್ಯಾಡ್‌ಗಳು: ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ಕೊಟ್ಟ ಐಟಿ ಕಂಪನಿಖಾಸಗಿ ವ್ಯಕ್ತಿಗಳಿಂದ ಸ್ವೀಕರಿಸಿದ 'ವಿವಿಧ ದೂರುಗಳ' ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.ಶೋಧದ ವೇಳೆ ಥಿಂಕ್ & ಲರ್ನ್ ಪ್ರೈ. ಲಿಮಿಟೆಡ್ 2011 ರಿಂದ 2023ರ ಅವಧಿಯಲ್ಲಿ ಸುಮಾರು 28,000 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಯನ್ನು() ಸ್ವೀಕರಿಸಿದೆ. ಅಲ್ಲದೆ ಇದೇ ಅವಧಿಯಲ್ಲಿ ಬೈಜೂಸ್ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಸುಮಾರು 9,754 ಕೋಟಿ ರೂ.ಗಳನ್ನು ವಿವಿಧ ವಿದೇಶಿ ಕಂಪನಿಗಳಿಗೆ ರವಾನಿಸಿದೆ ಎಂದು ಇಡಿ ತಿಳಿಸಿದೆ.