ನೌಕರರಿಗೆ ಸಿಹಿಸುದ್ದಿ: ಬಡ್ಡಿ ದರ ಶೇ.8.25ಕ್ಕೆ ಏರಿಕೆ, 3 ವರ್ಷಗಳಲ್ಲೇ ಗರಿಷ್ಠ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ () ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದ್ದು, ಇದು 3 ವರ್ಷಗಳ ಗರಿಷ್ಠ ಮಟ್ಟವಾಗಿದೆ. ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ () ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.25ಕ್ಕೆ ಹೆಚ್ಚಿಸಿದ್ದು, ಇದು 3 ವರ್ಷಗಳ ಗರಿಷ್ಠ ಮಟ್ಟವಾಗಿದೆ.ಶನಿವಾರ ನಡೆದ ಇಪಿಎಫ್‌ಒನ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೇಲಿನ ಬಡ್ಡಿದರವನ್ನು 2021-22ರಲ್ಲಿದ್ದ 8.10%ರಿಂದ 2022-23ರ ಆರ್ಥಿಕ ವರ್ಷಕ್ಕೆ 8.15%ಗೆ ಇಪಿಎಫ್‌ಒ ಏರಿಸಿತ್ತು. ಮಾರ್ಚ್ 2023ರಲ್ಲಿ ಆ ಹೆಚ್ಚಳ ಮಾಡಿದ ನಂತರ ಈ ಕ್ರಮ ಬಂದಿದೆ.ಇದನ್ನೂ ಓದಿ: ಗಗನಕ್ಕೇರುತ್ತಿದೆ ಬೆಳ್ಳುಳ್ಳಿ ಬೆಲೆ: ಪೂರೈಕೆಯಲ್ಲಿ ಶೇ. 50 ರಷ್ಟು ಕುಸಿತ, ಪ್ರತಿ ಕೆಜಿ 350 ರೂ.ಗೆ ಏರಿಕೆ! ಮೇಲಿನ ಬಡ್ಡಿ ದರವನ್ನು 2020-21ರಲ್ಲಿದ್ದ 8.5%ರಿಂದ 2021-22ರ ಹಣಕಾಸು ವರ್ಷಕ್ಕೆ 8.1%ಕ್ಕೆ ಇಳಿಸಲಾಗಿತ್ತು. ಇದು EPFOದ ನಾಲ್ಕು ದಶಕಗಳ ಅತಿ ಕಡಿಮೆ ಬಡ್ಡಿದರವಾಗಿತ್ತು. ಇದೀಗ ತದ್ವಿರುದ್ಧ ಎಂಬಂತೆ ಬಡ್ಡಿದರ ಏರಿಕೆ ಮಾಡಲಾಗಿದ್ದು, 2023-24ರ 8.25% ಬಡ್ಡಿ ದರವು EPFOನ ಆರು ಕೋಟಿಗೂ ಹೆಚ್ಚು ಸದಸ್ಯರ ಪಾಲಿಗೆ ಧನಾತ್ಮಕ ಬೆಳವಣಿಗೆಯಾಗಿದೆ. 2020-21ರ ಮೇಲಿನ ಬಡ್ಡಿದರವನ್ನು ಮಾರ್ಚ್ 2021ರಲ್ಲಿ 8.5%ಗೆ ನಿಗದಿಪಡಿಸಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. CBTಯ ನಿರ್ಧಾರದ ನಂತರ, ಮುಂಬರುವ ಆರ್ಥಿಕ ವರ್ಷಕ್ಕೆ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ.ಇದನ್ನೂ ಓದಿ: ಸತತ 6ನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ; ಶೇಕಡಾ 6.5 ರಲ್ಲೇ ಮುಂದುವರಿಕೆ: ಆರ್‌ಬಿಐಐತಿಹಾಸಿಕ ಬೆಳವಣಿಗೆ ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿತ್ತು. ಇದು 2018-19 ರಲ್ಲಿ ಶೇಕಡಾ 8.65 ಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷಗಳಲ್ಲಿ, ಬಡ್ಡಿದರಗಳು 2016-17 ರಲ್ಲಿ ಶೇ.8.65, 2017-18 ರಲ್ಲಿ ಶೇ.8.55, ಮತ್ತು 2015-16 ರಲ್ಲಿ ಶೇ.8.8 ಸ್ವಲ್ಪ ಹೆಚ್ಚಿನ ದರಗಳೊಂದಿಗೆ ವ್ಯತ್ಯಾಸಗಳನ್ನು ಕಂಡಿವೆ. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15 ರಲ್ಲಿ ಶೇಕಡಾ 8.75 ರಷ್ಟು ಹೆಚ್ಚಿನ ಬಡ್ಡಿದರವನ್ನು ಒದಗಿಸಿತ್ತು. 2012-13 ಕ್ಕೆ ಹೋಲಿಸಿದರೆ ಶೇ.8.5, ಆದರೆ ಬಡ್ಡಿ ದರವು 2011-12 ರಲ್ಲಿ ಶೇ.8.25 ರಷ್ಟಿತ್ತು.