ಜೆಟ್ ಏರ್ವೇಸ್ ನಿಯೋಜಿತ ಸಿಇಒ ಸಂಜೀವ್ ಕಪೂರ್ ರಾಜೀನಾಮೆ ಜೆಟ್ ಏರ್ವೇಸ್ ನ ಜಿಯೋಜಿತ ಸಿಇಒ ಸಂಜೀವ್ ಕಪೂರ್ ರಾಜೀನಾಮೆ ನೀಡಿದ್ದಾರೆ. ನವದೆಹಲಿ: ಜೆಟ್ ಏರ್ವೇಸ್ ನ ಜಿಯೋಜಿತ ಸಿಇಒ ಸಂಜೀವ್ ಕಪೂರ್ ರಾಜೀನಾಮೆ ನೀಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಸಂಜೀವ್ ಕಪೂರ್ ಏರ್ ಲೈನ್ಸ್ ಗೆ ಸೇರಿದ್ದರು. ವಿಮಾನಯಾನ ಸಂಸ್ಥೆಯಲ್ಲಿ ಕಪೂರ್‌ ಗೆ ಶುಕ್ರವಾರ ಕೊನೆಯ ಕೆಲಸದ ದಿನವಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ನಾಲ್ಕು ಹೊಸ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿದ ಜೆಟ್ ಏರ್ವೇಸ್ರಾಜೀನಾಮೆ ನೀಡಿರುವ ಬಗ್ಗೆ ಕಪೂರ್ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಜೆಟ್ ಏರ್‌ವೇಸ್ ಏಪ್ರಿಲ್ 2019 ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು ಮತ್ತು ನಂತರ ದಿವಾಳಿತನದ ಪ್ರಕ್ರಿಯೆಯನ್ನು ಘೋಷಿಸಿತ್ತು.ದಿವಾಳಿತನ ಪರಿಹಾರ ಪ್ರಕ್ರಿಯೆಯ ಅಡಿಯಲ್ಲಿ ಜೆಟ್ ಏರ್ವೇಸ್ ನ ಖರೀದಿಗೆ ಜಲನ್ ಕಲ್ರಾಕ್ ಒಕ್ಕೂಟ ಬಿಡ್ ನ್ನು ಗೆದ್ದಿದೆ.