ಭಾರತದ ಆರ್ಥಿಕ ಬೆಳವಣಿಗೆ ತುಂಬಾ ದುರ್ಬಲವಾಗಿದೆ: ಆರ್ ಬಿಐ ಎಂಪಿಸಿ ಸದಸ್ಯ ಭಾರತದ ಆರ್ಥಿಕ ಬೆಳವಣಿಗೆಯು 'ಬಹಳ ದುರ್ಬಲವಾಗಿದೆ' ಎಂದು ತೋರುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ... ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು 'ಬಹಳ ದುರ್ಬಲವಾಗಿದೆ' ಎಂದು ತೋರುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಸದಸ್ಯ ಜಯಂತ್ ಆರ್ ವರ್ಮಾ ಅವರು ಭಾನುವಾರ ಹೇಳಿದ್ದಾರೆ.ಭಾರತದಲ್ಲಿ 2022-23 ರಲ್ಲಿ ಹಣದುಬ್ಬರವು ಅಧಿಕವಾಗಿದೆ. ಆದರೆ 2023-24 ರಲ್ಲಿ ಅದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ವರ್ಮಾ ತಿಳಿಸಿದ್ದಾರೆ."ಆದಾಗ್ಯೂ, ದೇಶದ ಆರ್ಥಿಕ ಬೆಳವಣಿಗೆಯು ಬಹಳ ದುರ್ಬಲವಾಗಿ ಕಂಡುಬರುತ್ತಿದೆ ಮತ್ತು ವಿತ್ತೀಯ ಬಿಗಿಗೊಳಿಸುವಿಕೆಯು ಬೇಡಿಕೆಯನ್ನು ಕುಗ್ಗಿಸುತ್ತಿದೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.ಇದನ್ನು ಓದಿ: ಹಣದುಬ್ಬರ ಭೀತಿ: ಸತತ 4ನೇ ದಿನವೂ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 927 ಅಂಕ ಕುಸಿತಹೆಚ್ಚಿನ ಬಡ್ಡಿದರಗಳು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತಿದೆ ಎಂದ ವರ್ಮಾ, ಸರ್ಕಾರವು ಹಣಕಾಸಿನ ಬಲವರ್ಧನೆಯ ಕ್ರಮದಲ್ಲಿದೆ ಆರ್ಥಿಕತೆಗೆ ಬೆಂಬಲವನ್ನು ಕಡಿಮೆ ಮಾಡುತ್ತಿದೆ ಎಂದಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ 2023- 24ರಲ್ಲಿ ಭಾರತ ಶೇಕಡಾ 6.4 ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿಯ() ಮೊದಲ ಮುಂಗಡ ಅಂದಾಜಿನ ಪ್ರಕಾರ 2022-23 ರಲ್ಲಿ ಒಟ್ಟು ನಿವ್ವಳ ಆಂತರಿಕ ಉತ್ಪಾದನೆ (ಜಿಡಿಪಿ)ಯ ಬೆಳವಣಿಗೆ ದರ ಶೇ.7ರಷ್ಟು ಆಗಲಿದೆ ಎಂದು ನಿರೀಕ್ಷಿಸಲಾಗಿದೆ.