ಕರ್ನಾಟಕದಲ್ಲಿ ಏರ್ ಟೆಲ್ 3 ಜಿ ನೆಟ್ ವರ್ಕ್ ಸ್ಥಗಿತ ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ. ಬೆಂಗಳೂರು: ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಈಗ ಏರ್‌ಟೆಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳು ಹೈಸ್ಪೀಡ್ 4 ಜಿ ನೆಟ್‌ವರ್ಕ್‌ ನೊಂದಿಗೆ ಹೆಚ್ ಡಿ ಗುಣಮಟ್ಟದ ಕರೆಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಏರ್ ಟೆಲ್ ತಿಳಿಸಿದೆ. ಸಾಮಾನ್ಯ ಮೊಬೈಲ್ ಪೋನ್ ಗ್ರಾಹಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2 ಜಿ ಸೇವೆಯನ್ನು ಮುಂದುವರೆಸುವುದಾಗಿ ಟೆಲಿಕಾಮ್ ಆಪರೇಟರ್ ತಿಳಿಸಿದ್ದಾರೆ.