: ಅಕ್ಷಯ ತೃತೀಯ, ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ; ಬೆಲೆ 500 ರೂ. ಇಳಿಕೆ! ಅಕ್ಷಯ ತೃತೀಯ ಪೂಜೆಗೆ ದಿನಗಣನೆ ಆರಂಭವಾಗಿರುವಂತೆಯೇ ಶುಕ್ರವಾರ ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ ಲಭಿಸಿದ್ದು, ಮಹಿಳೆಯರ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ 500 ರೂ ಇಳಿಕೆಯಾಗಿದೆ. ಬೆಂಗಳೂರು: ಅಕ್ಷಯ ತೃತೀಯ ಪೂಜೆಗೆ ದಿನಗಣನೆ ಆರಂಭವಾಗಿರುವಂತೆಯೇ ಶುಕ್ರವಾರ ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ ಲಭಿಸಿದ್ದು, ಮಹಿಳೆಯರ ನೆಚ್ಚಿನ ಹಳದಿ ಲೋಹದ ಬೆಲೆಯಲ್ಲಿ 500 ರೂ ಇಳಿಕೆಯಾಗಿದೆ.ಹೌದು.. ಗಗನ ಮುಖಿಯಾಗಿದ್ದ ಚಿನ್ನದ ದರ ಇಂದು ಅಲ್ಪ ಪ್ರಮಾಣದಲ್ಲಿ ಇಳಿದಿದ್ದು, ಪ್ರತಿ ಗ್ರಾಂ ಚಿನ್ನದ ದರದಲ್ಲಿ 50 ರೂ ಹಾಗೂ ಪ್ರತಿ ಹತ್ತು ಗ್ರಾಂ ಚಿನ್ನದ ಮೇಲೆ 500 ರೂ ಇಳಿಕೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಚಿನ್ನದ ದರದಲ್ಲಿ 50 ರೂ ಕಡಿತವಾಗಿದ್ದು, ಪ್ರತೀ ಗ್ರಾಂಗೆ 6,575 ರೂ ಇದೆ. ನಿನ್ನೆ ಇದೇ ದರ 625 ರೂ ನಷ್ಟಿತ್ತು. 22 ಕ್ಯಾರೆಟ್ ನ 10 ಗ್ರಾಂ ಚಿನ್ನ 65,750 ರೂ ಗೆ ಮಾರಾಟವಾಗುತ್ತಿದೆ. ಅಂತೆಯೇ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರದಲ್ಲೂ 54 ರೂ ಕಡಿತವಾಗಿದ್ದು, 24 ಕ್ಯಾರೆಟ್ ನ 1 ಗ್ರಾಂ ಚಿನ್ನ ಇಂದು 7,173 ರೂಗೆ ಮಾರಾಟವಾಗುತ್ತಿದೆ. ನಿನ್ನೆ ಈ ದರ 7,227 ರೂನಷ್ಟಿತ್ತು. 24 ಕ್ಯಾರೆಟ್ ನ 10 ಗ್ರಾಂ ಚಿನ್ನ 71,730 ರೂ ಗೆ ಮಾರಾಟವಾಗುತ್ತಿದೆ.