17 ಕಂಪನಿಗಳಿಂದ ಲ್ಯಾಪ್ ಟಾಪ್, ಪಿಸಿ ತಯಾರಿಕೆ ಆರಂಭ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಟಿ ಹಾರ್ಡ್ ವೇರ್ ಉತ್ಪಾದನೆ ಆರಂಭಿಸಲು ಸುಮಾರು 17 ಕಂಪನಿಗಳು ಆಯ್ಕೆಯಾಗಿವೆ ಎಂದು ಮಾಹಿತಿ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ತಿಳಿಸಿದ್ದಾರೆ. ಕಳೆದ ವರ್ಷ 27 ಕಂಪನಿಗಳ ಪೈಕಿ ಆರರಿಂದ-ಏಳು ಕಂಪನಿಗಳು ಉತ್ಪಾದನೆ ಆರಂಭಿಸಿದ್ದವು. ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಟಿ ಹಾರ್ಡ್ ವೇರ್ ಉತ್ಪಾದನೆ ಆರಂಭಿಸಲು ಸುಮಾರು 17 ಕಂಪನಿಗಳು ಆಯ್ಕೆಯಾಗಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ತಿಳಿಸಿದ್ದಾರೆ. ಕಳೆದ ವರ್ಷ 27 ಕಂಪನಿಗಳ ಪೈಕಿ ಆರರಿಂದ-ಏಳು ಕಂಪನಿಗಳು ಉತ್ಪಾದನೆ ಆರಂಭಿಸಿದ್ದವು.ಸರ್ಕಾರ ಆಗಾಗ್ಗೆ ಪಿಎಲ್‌ಐ ಪ್ರೋತ್ಸಾಹಕ ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದು, ಅದರಿಂದ ಸಾಕಷ್ಟು ತೃಪ್ತವಾಗಿದೆ ಎಂದು ಕೃಷ್ಣನ್ ಉಲ್ಲೇಖಿಸಿದ್ದಾರೆ. ಐಟಿ ಹಾರ್ಡ್ ವೇರ್ ಗಾಗಿ ಸರ್ಕಾರ ಮೇ 2023 ರಂದು ರೂ. 17,000 ಕೋಟಿಗಳ ಪರಿಷ್ಕೃತ ಪರಿಷ್ಕೃತ ಯೋಜನೆಯನ್ನು ಪರಿಚಯಿಸಿತು. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು, ಸರ್ವರ್‌ಗಳು ಮತ್ತಿತರ ಸಾಧನಗಳ ಉತ್ಪಾದನೆಯನ್ನು ದೇಶದೊಳಗೆ ಹೆಚ್ಚಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.'ಪ್ರಸಕ್ತ ವರ್ಷದಲ್ಲಿ 27 ಕಂಪನಿಗಳಲ್ಲಿ ಹೆಚ್ಚಿನವು ತಯಾರಿಕೆ ಪ್ರಾರಂಭಿಸುವ ನಿರೀಕ್ಷೆಯಿದೆ. ಸಂಖ್ಯೆಗಳನ್ನು ಸರಿಯಾಗಿ ನೆನಪಿಸಿಕೊಂಡರೆ, ಈ ವರ್ಷ ಸುಮಾರು 17 ಕಂಪನಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಸುಮಾರು ಆರು ಅಥವಾ ಏಳು ಕಂಪನಿಗಳು ಪ್ರಾರಂಭವಾಗಿದ್ದವು ಮತ್ತು ಮುಂದಿನ ವರ್ಷ ಎರಡು ಕಂಪನಿಗಳು ಪ್ರಾರಂಭವಾಗಲಿವೆ ಎಂದು ಕೃಷ್ಣನ್ ತಿಳಿಸಿದರು.ನವೆಂಬರ್ 2023 ರಲ್ಲಿ ಐಟಿ ಹಾರ್ಡ್‌ವೇರ್‌ಗಾಗಿ ಯೋಜನೆಗಾಗಿ ಡೆಲ್, ಎಚ್‌ಪಿ, ಫಾಕ್ಸ್‌ಕಾನ್ ಮತ್ತು ಲೆನೊವೊ ಸೇರಿದಂತೆ 27 ಕಂಪನಿಗಳ ಅರ್ಜಿಗಳನ್ನು ಸರ್ಕಾರ ಅನುಮೋದಿಸಿತ್ತು. ಈ ಕ್ರಮವು ಪಿಸಿಗಳು, ಸರ್ವರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಉತ್ಪಾದನೆಯಲ್ಲಿ ಭಾರತವನ್ನು ಪ್ರಮುಖ ಶಕ್ತಿಯನ್ನಾಗಿ ಮಾಡುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವ ಅಶ್ವಿನಿ ವೈಷ್ಣವ್ ಅವರು ಅರ್ಜಿದಾರರನ್ನು ಪ್ರಕಟಿಸುವಾಗ ಹೇಳಿದ್ದರು. ಈ 27 ಕಂಪನಿಗಳು ರೂ 3,000 ಕೋಟಿ ಹೂಡಿಕೆ, 50,000 ನೇರ ಉದ್ಯೋಗ ಮತ್ತು 1,50,000 ಪರೋಕ್ಷ ಉದ್ಯೋಗಕ್ಕೆ ಕಾರಣವಾಗುತ್ತವೆ ಎಂದು ಅವರು ಮಾಹಿತಿ ನೀಡಿದ್ದರು. ಯೋಜನೆಯಡಿಯಲ್ಲಿ ಅನುಮೋದಿಸಲಾದ ಕಂಪನಿಗಳಲ್ಲಿ , , , , , , ರೈಸಿಂಗ್ ಸ್ಟಾರ್ಸ್ ಹೈಟೆಕ್, ಇಂಡಿಯಾ ಸೇಲ್ಸ್, ಪ್ಯಾಜೆಟ್ ಎಲೆಕ್ಟ್ರಾನಿಕ್ಸ್, , ಮತ್ತಿತರ ಕಂಪನಿಗಳು ಸೇರಿವೆ.ಆದಾಗ್ಯೂ, ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಯೋಜನೆ ಪ್ರಾರಂಭವಾದ ಕಾರಣ ಸರ್ಕಾರ ಯಾವುದೇ ಕಂಪನಿಗಳಿಗೆ ಯೋಜನೆಯಡಿ ಯಾವುದೇ ಪ್ರೋತ್ಸಾಹವನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, ಕಂಪನಿಗಳು ಲೆಕ್ಕಪರಿಶೋಧನೆ ಮತ್ತು ಇತರ ಅವಶ್ಯಕತೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. “ಆದ್ದರಿಂದ, ಇನ್ನೂ ಪ್ರೋತ್ಸಾಹಕ ಬಿಡುಗಡೆ ಮಾಡಬೇಕಾಗಿದೆ. ಇದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಕೃಷ್ಣನ್ ತಿಳಿಸಿದರು.ಎಲ್ಲಾ ಪ್ರಮುಖ ಕಂಪನಿಗಳು ಸೇರಿದಂತೆ ಸುಮಾರು 44 ಪ್ರಮುಖ ತಂತ್ರಜ್ಞಾನ ಕಂಪನಿಗಳು ಯೋಜನೆಗೆ ಅರ್ಜಿ ಸಲ್ಲಿಸಿವೆ. ಕೌಂಟರ್‌ಪಾಯಿಂಟ್ ರಿಸರ್ಚ್ ಸಂಸ್ಥೆಯ ಪ್ರಕಾರ, ಭಾರತದ ಒಟ್ಟು ಲ್ಯಾಪ್‌ಟಾಪ್ ಅಥವಾ ಮಾರುಕಟ್ಟೆ ಗಾತ್ರವು ವಾರ್ಷಿಕವಾಗಿ 8 ಬಿಲಿಯನ್ ಡಾಲರ್ ನಷ್ಟಿದ್ದು,, ಸರಿಸುಮಾರು ಶೇ.65 ರಷ್ಟು ಯೂನಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.