: 22 ಬಿಲಿಯನ್ ಡಾಲರ್ ಇದ್ದ ಮೌಲ್ಯ ಈಗ 3 ಬಿಲಿಯನ್ ಗೆ ಕುಸಿತ ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್ನ ಮೌಲ್ಯ ( ’) ಈಗ ನೆಲಕಚ್ಚಿದೆ. ಮುಂಬೈ: ಸಾಲ, ತೆರಿಗೆ ವಿವಾದ, ನಷ್ಟ ಇತ್ಯಾದಿಗಳಿಂದ ಸಾಕಷ್ಟು ವಿವಾದಗಳಿಗೆ ತುತ್ತಾಗಿರುವ ಖ್ಯಾತ ಖಾಸಗಿ ಶೈಕ್ಷಣಿಕ ಸ್ಟಾರ್ಟಪ್ ಬೈಜೂಸ್ ದುರಂತದ ಸರಮಾಲೆ ಮುಂದುವರೆದಿದ್ದು, ಬೈಜುಸ್ನ ಮೌಲ್ಯ ( ’) ಈಗ ನೆಲಕಚ್ಚಿದೆ.ಹೌದು.. ಒಂದು ಕಾಲದಲ್ಲಿ ಭಾರತದ ಸ್ಟಾರ್ಟಪ್ ಸೂಪರ್ಸ್ಟಾರ್ ಎನಿಸಿದ್ದ ಬೈಜುಸ್ ಈಗ ದಯನೀಯ ಸ್ಥಿತಿಗೆ ಕುಸಿದಿದ್ದು, 22 ಬಿಲಿಯನ್ ಡಾಲರ್ ಇದ್ದ ಬೈಜುಸ್ ಮೌಲ್ಯ ಈಗ 3 ಬಿಲಿಯನ್ ಗಿಂತ ಕಡಿಮೆ ಮೊತ್ತಕ್ಕೆ ಕುಸಿದಿದೆ. ಬೈಜುಸ್‌ನಲ್ಲಿ ಸುಮಾರು 9.6% ಪಾಲನ್ನು ಹೊಂದಿರುವ ನೆದರ್‌ಲ್ಯಾಂಡ್ಸ್ ಮೂಲದ ತಂತ್ರಜ್ಞಾನ ಹೂಡಿಕೆದಾರ ಪ್ರೊಸಸ್ (), ಸ್ಟಾರ್ಟ್‌ಅಪ್‌ನ ಮೌಲ್ಯಮಾಪನವನ್ನು $3 ಬಿಲಿಯನ್‌ಗಿಂತ ಕಡಿಮೆಗೆ ಗುರುತಿಸಿದೆ. ಕಳೆದ ವರ್ಷವಷ್ಟೇ ಬೈಜುಸ್ನ ಮೌಲ್ಯ 22 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು. ಈಗ ಒಂದೇ ವರ್ಷದಲ್ಲಿ ಶೇ. 86ರಷ್ಟು ಮೌಲ್ಯ ಕಳೆದುಕೊಂಡಿದೆ.ಇದನ್ನೂ ಓದಿ: ಹಬ್ಬದ ಅವಧಿಯಲ್ಲಿ ಆಟೋಮೊಬೈಲ್ ಮಾರಾಟ ದಾಖಲೆಯ ಏರಿಕೆ: ಎಫ್ಎಡಿಎಪ್ರೋಸುಸ್, ಬ್ಲ್ಯಾಕ್ರಾಕ್ ಮೊದಲಾದ ಬೈಜುಸ್ ಷೇರುದಾರರು ಕಳೆದ ಒಂದು ವರ್ಷದಿಂದಲೂ ಕೂಡ ಮೌಲ್ಯ ಕಡಿತಗೊಳಿಸುತ್ತಲೇ ಬಂದಿವೆ. 22 ಬಿಲಿಯನ್ ಡಾಲರ್ ಇದ್ದ ಬೈಜುಸ್ನ ಮೌಲ್ಯ ಮಾರ್ಚ್ ತಿಂಗಳಲ್ಲಿ 11 ಬಿಲಿಯನ್ ಡಾಲರ್, ಮೇ ತಿಂಗಳಲ್ಲಿ 8 ಬಿಲಿಯನ್ ಡಾಲರ್, ಜೂನ್ ತಿಂಗಳಲ್ಲಿ 5 ಬಿಲಿಯನ್ ಡಾಲರ್ಗೆ ಕಡಿತಗೊಳಿಸಲಾಗಿದೆ. ಇದೀಗ 3 ಬಿಲಿಯನ್ ಡಾಲರ್ಗಿಂತ ಕಡಿಮೆ ಮೌಲ್ಯಕ್ಕೆ ಬೈಜುಸ್ ಕುಸಿದಿದೆ.ಬೈಜುಸ್ ಸಂಸ್ಥೆ ಬಹಳ ವಿಳಂಬವಾಗಿ ಬಿಡುಗಡೆ ಮಾಡಿದ 2021-22ರ ಹಣಕಾಸು ವರ್ಷದ ತನ್ನ ಆದಾಯದ ವರದಿಯಲ್ಲಿ, ಅದು ಸಾಕಷ್ಟು ಆದಾಯವೃದ್ಧಿ ಕಂಡಿದೆಯಾದರೂ ಲಾಭ ಕಾಣದೇ 2,250 ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಹಣಕಾಸು ವರದಿ ವಿಳಂಬಗೊಂಡ ಪರಿಣಾಮ ಬೈಜುಸ್ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.