ಮಸ್ಕ್ ಒಡೆತನಕ್ಕೆ ಟ್ವಿಟರ್: ಹೊಸ ವೇದಿಕೆಯತ್ತ ಬಳಕೆದಾರರ ಚಿತ್ತ; ಮುಂಚೂಣಿಗೆ 'ಮಾಸ್ಟೋಡಾನ್‌'; ಇತರೆ ಪರ್ಯಾಯಗಳ ಪಟ್ಟಿ ಇಲ್ಲಿದೆ! ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡ ನಂತರ, ಪ್ಲಾಟ್‌ಫಾರ್ಮ್‌ನ ಹೊಸ ಆಡಳಿತ ಹೊಸ ನಿಯಮಗಳಿಂದ ಕೆರಳಿದ ಬಳಕೆದಾರರು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಗಮನ ಕೇಂದ್ರೀಕರಿಸಿದ್ದಾರೆ. ಪ್ಯಾರಿಸ್: ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡ ನಂತರ, ಪ್ಲಾಟ್‌ಫಾರ್ಮ್‌ನ ಹೊಸ ಆಡಳಿತ ಹೊಸ ನಿಯಮಗಳಿಂದ ಕೆರಳಿದ ಬಳಕೆದಾರರು ತಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಗಮನ ಕೇಂದ್ರೀಕರಿಸಿದ್ದಾರೆ.ಹೌದು.. ಎಲೋನ್ ಮಸ್ಕ್ ಟ್ವಿಟ್ಟರ್ ಮಾಲೀಕತ್ವ ವಹಿಸಿಕೊಂಡ ಬಳಿಕ ಟ್ವಿಟರ್ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದು, ಪ್ರಮುಖವಾಗಿ ತನ್ನ ಹೊಸ ನಿಯಮಗಳಿಂದ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ. ಬ್ಲೂಟಿಕ್ ಸೇವೆಗೆ ಹಣಪಾವತಿ ಈ ನಿಯಮಗಳಲ್ಲಿ ಪ್ರಮುಖವಾಗಿದ್ದು, ಇದಲ್ಲದೇ ಸಿಬ್ಬಂದಿಗಳ ಸಾಮೂಹಿಕ ತೆಗೆದುಹಾಕುವಿಕೆ, ನಿಷೇಧಕ್ಕೆ ಒಳಗಾಗಿರುವ ಬಳಕೆದಾರರ ಮರು ಸೇರ್ಪಡೆ ಕೂಡ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಇದು ಬಳಕೆದಾರರು ಇದೀಗ ಪರ್ಯಾಯ ಮಾರ್ಗಗಳತ್ತ ದೃಷ್ಟಿಹಾಯಿಸುವಂತೆ ಮಾಡಿದೆ.ಇದನ್ನೂ ಓದಿ: ಟ್ವಿಟರ್ ಹಾದಿಯಲ್ಲಿ ಫೇಸ್ ಬುಕ್; ಬೃಹತ್ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದು?ಜಾಗತಿಕವಾಗಿ ಟ್ವಿಟರ್ ಗೆ ಸಾಕಷ್ಟು ಪರ್ಯಾಯ ಆ್ಯಪ್ ಗಳಿವೆ. ಈ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಆ್ಯಪ್ ಎಂದರೆ ಜರ್ಮನ್ ಮಾಲೀಕತ್ವದ 'ಮಾಸ್ಟೋಡೋನ್'.. ಮಾಸ್ಟೋಡಾನ್ ಆ್ಯಂಟಿ ಟ್ವಿಟರ್ ಎಂದೇ ಖ್ಯಾತಿಗಳಿಸಿರುವ ತಾಣ..ಇತ್ತೀಚಿನ ದಿನಗಳವರೆಗೂ ಮಾಸ್ಟೋಡಾನ್ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರಲಿಲ್ಲ. ಆದರೆ ಟ್ವಿಟರ್ ಮಾಲೀಕತ್ವ ಬದಲಾವಣೆ ಮತ್ತು ಆ ಬಳಿಕದ ಬೆಳವಣಿಗೆಗಳ ನಂತರ ಬಳಕೆದಾರರು ಮಾಸ್ಟೋಡಾನ್ ನತ್ತ ಮುಖ ಮಾಡಿದ್ದಾರೆ. ಇದು ಇಂಟರ್ನೆಟ್ ಬಳಕೆದಾರರಲ್ಲಿ ಮಾಸ್ಟೋಡಾನ್ ಜನಪ್ರಿಯತೆ ಸ್ಫೋಟಿಸಿದೆ.2016 ರಲ್ಲಿ ಜರ್ಮನ್ ಡೆವಲಪರ್ ಯುಜೆನ್ ರೋಚ್ಕೊರಿಂದ ರಚಿಸಲ್ಪಟ್ಟ ಸೈಟ್ ಇದಾಗಿದ್ದು, ಗೌಪ್ಯತೆಯನ್ನು ಸಂರಕ್ಷಿಸುವುದು ಜಾಹೀರಾತುಗಳಿಲ್ಲದೆಯೇ "ವಿಕೇಂದ್ರೀಕೃತ" ಸಾಮಾಜಿಕ ನೆಟ್‌ವರ್ಕ್‌ನಂತೆ ಪ್ರಸ್ತುತಪಡಿಸುವುದು ಮಾಸ್ಟೋಡಾನ್ ವಿಶೇಷತೆಯಾಗಿದೆ. ತನ್ನ ಟ್ವಿಟರ್ ವಿರೋಧಿ ನಿಲುವಿನಿಂದಲೇ ಹೆಚ್ಚು ಸುದ್ದಿಯಾಗಿದ್ದ ಮಾಸ್ಟೋಡಾನ್, ಟ್ವಿಟರ್‌ನೊಂದಿಗಿನ ಮಸ್ಕ್ ಒಪ್ಪಂದವನ್ನು ಏಪ್ರಿಲ್‌ನಲ್ಲಿ ಘೋಷಿಸಿದಾಗ 'ಆನ್‌ಲೈನ್‌ನಲ್ಲಿ ಸಂವಹನ ಮಾಡುವ ನಿಮ್ಮ ಸಾಮರ್ಥ್ಯವು ಒಂದೇ ವಾಣಿಜ್ಯ ಕಂಪನಿಯ ಇಚ್ಛೆಯಂತೆ ಇರಬಾರದು!" ಎಂದು ಟ್ವೀಟ್ ಮಾಡಿತ್ತು. ಇದನ್ನೂ ಓದಿ: ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್: ಐಒಎಸ್ ನಿಂದ ಚಾಲನೆ ನೀಡಿದ ಟ್ವಿಟರ್ಎಲೋನ್ ಮಸ್ಕ್ ಪ್ರವೇಶದ ಬಳಿಕ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಂಡ ಮಾಸ್ಟೋಡಾನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡ ಅಕ್ಟೋಬರ್ 27 ರಿಂದ 1,124 ಸರ್ವರ್‌ಗಳು ಮತ್ತು ಸುಮಾರು 490,000 ಹೊಸ ಬಳಕೆದಾರರ ಸೇರ್ಪಡೆಯೊಂದಿಗೆ ಮಾಸ್ಟೋಡಾನ್ ಸೋಮವಾರ 1 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪಿದೆ ಎಂದು ರೋಚ್ಕೊ ಹೇಳಿದ್ದಾರೆ. ಜೂನ್ ಅಂತ್ಯದ ವೇಳೆಗೆ ಸುಮಾರು 238 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಗೆ ಹೋಲಿಸಿದರೆ ಈ ಪ್ರಮಾಣ ಇನ್ನೂ ಚಿಕ್ಕದು ಎಂದು ಹೇಳಲಾಗಿದೆ.ಇದನ್ನೂ ಓದಿ: ಉದ್ಯೋಗ ಕಡಿತ ಸಮರ್ಥಿಸಿಕೊಂಡ ಮಸ್ಕ್, ಜಾಹಿರಾತುದಾರರಿಗೆ ನೀಡಿದರು ಎಚ್ಚರಿಕೆ....ಮಾಸ್ಟೋಡಾನ್‌ಗೆ ಪ್ರಚಾರವು ಸುಲಭವಾಗಿರಲಿಲ್ಲ ಮತ್ತು ಅನೇಕ ಹೊಸ ಬಳಕೆದಾರರು ಪ್ಲಾಟ್‌ಫಾರ್ಮ್‌ನ ಅರ್ಥಹೀನ ಇಂಟರ್‌ಫೇಸ್‌ನ ಬಗ್ಗೆ ದೂರು ನೀಡುತ್ತಿದ್ದಾರೆ, ಖಾತೆಯನ್ನು ರಚಿಸುವಲ್ಲಿನ ತೊಂದರೆ ಮತ್ತು ಟೆಕ್ ದೈತ್ಯರು ನಡೆಸುವ ಸೈಟ್‌ಗಳಂತಲ್ಲದೆ ಕಳಪೆ ಪ್ರತಿಕ್ರಿಯೆ ಸಮಯದ ಬಗ್ಗೆ ದೂರುತ್ತಿದ್ದಾರೆ. ಕಂಟೆಂಟ್ ಮಿತಗೊಳಿಸುವಿಕೆಯು ಸಹ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದ್ದು, ಏಕೆಂದರೆ ಇದು ಸರ್ವರ್ ನಿರ್ವಾಹಕರ ಸ್ವಂತ ವಿವೇಚನೆಗೆ ಬಿಟ್ಟಿದ್ದಾಗಿದೆ. ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಅವರ ಬ್ಲೂಸ್ಕೈ ಇದೇ ಹಾದಿಯಲ್ಲಿರುವ ಮತ್ತೊಂದು ಪರ್ಯಾಯ ವೇದಿಕೆ ಎಂದರೆ ಅದರು ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ತಯಾರಿಸಿರುವ ಬ್ಲೂಸ್ಕೈ.. ಅಕ್ಟೋಬರ್ ಅಂತ್ಯದಲ್ಲಿ ಕೇವಲ 48 ಗಂಟೆಗಳ ನಂತರ 30,000 ಜನರು ಬ್ಲೂ ಸ್ಕೈಗೆ ಲಾಗಿನ್ ಆಗಿದ್ದಾರೆ ಎಂದು ಡಾರ್ಸೆ ಹೇಳಿಕೊಂಡಿದ್ದಾರೆ. ಅಂತೆಯೇ ಕೋಹೋಸ್ಟ್, ಅದರ ಬಳಕೆದಾರರ ವೈಯಕ್ತಿಕ ಡೇಟಾವನ್ನು ತಾವು ಎಂದಿಗೂ ಮಾರಾಟ ಮಾಡುವುದಿಲ್ಲ ಎಂದೂ ಡಾರ್ಸೆ ಭರವಸೆ ನೀಡಿದ್ದಾರೆ.ಇದೇ ಹಾದಿಯಲ್ಲಿರುವ ಇತರೆ ಆ್ಯಪ್ ಗಳೆಂದರೆ, , ಆಡಿಯೋ ಚಾಟ್ ಅಪ್ಲಿಕೇಶನ್ ಕ್ಲಬ್‌ಹೌಸ್‌ ಗಳೂ ಕೂಡ ಇದೀಗ ಜನಪ್ರಿಯತೆಯ ಪುನರುತ್ಥಾನವನ್ನು ಕಾಣುತ್ತಿವೆ. ನಂತರ ಬಲಪಂಥೀಯ ಸೈಟ್‌ಗಳಾದ ಗ್ಯಾಬ್, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿರುವ ಪ್ಲಾಟ್‌ಫಾರ್ಮ್ ಪಾರ್ಲರ್ ಅಥವಾ ಟ್ರುತ್ ಸೋಷಿಯಲ್ ಕೂಡ ಟ್ವಿಟರ್ ಪರ್ಯಾಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.ಇದನ್ನೂ ಓದಿ: ಅಮೆರಿಕ ನಂತರ, ಭಾರತದಲ್ಲೂ ಟ್ವಿಟರ್ ಸಿಬ್ಬಂದಿ ವಜಾ; ಎರಡು ವಿಭಾಗ ಸಂಪೂರ್ಣ ಬಂದ್!ಭಾರತದಲ್ಲಿ ಕೂ ಕೂಡ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿದ್ದು, ಕೋಟ್ಯಂತರ ಮಂದಿ ಸಕ್ರಿಯ ಬಳಕೆದಾರರನ್ನು ಹೊಂದಿದೆ.ಇತರ ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಇಲ್ಲಿದೆ (ಕೂ) (ಬ್ಲೂಸ್ಕೈ) (ಟ್ರೈಬೆಲ್) (ಕೌಂಟರ್ ಸೋಶಿಯಲ್) (ಟಂಬ್ಲರ್) (ಗ್ಯಾಬ್) (ಯೂಸಿಂಕ್) (ಅಮಿನೋ) (ಗೆಟ್ಟ್`ರ್) (ಪಾರ್ಲೆರ್) (ಕೋಹೋಸ್ಟ್) (ಕೌಂಟರ್ ಸೋಷಿಯಲ್) (ರ್ಯಾಫ್ಟ್`ರ್) (ಪ್ಲರ್ಕ್) . (ಡಬ್ಲ್ಯೂಟಿ.ಸೋಷಿಯಲ್) (ಇನ್ಸ್ಟಾಗ್ರಾಮ್) (ಡಿಸ್ಕಾರ್ಡ್)