ಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ. ನವದೆಹಲಿ: ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ. ಕೊರೋನಾವೈರಸ್ ಅನಿಶ್ಚಿತತೆಯ ದೃಷ್ಟಿಯಿಂದ ಏರ್‌ಏಷ್ಯಾ ಇಂಡಿಯಾ ಈ ಪ್ರಸ್ತಾಪವನ್ನು ಘೋಷಿಸಿದೆ.ಇದಲ್ಲದೆ, ಏರ್‌ಏಷ್ಯಾ ಇಂಡಿಯಾ .. ಮತ್ತು ಏರ್‌ಏಷ್ಯಾ ಇಂಡಿಯಾ ಮೊಬೈಲ್ ಆ್ಯಪ್‌ನಲ್ಲಿ 14 ದಿನಗಳ ಮುಂಚಿತವಾಗಿ ಮಾಡಿದ ಬುಕಿಂಗ್‌ಗಳಿಗೆ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಪ್ರೋಮೋ ಕೋಡ್ FLYNOW10 ಬಳಸಿ ಯಾರು ಟಿಕೆಟ್ ಬುಕ್ ಮಾಡುವರೋ ಅವರು ಈ ರಿಯಾಯಿತಿ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದೆ.ಜನರು ತಮ್ಮ ಬುಕಿಂಗ್ ಅನ್ನು ನಿರ್ವಹಿಸಬಹುದು ಮತ್ತು ರೀಶೆಡ್ಯೂಲಿಂಗ್ ಮಾಡಿಸುವ ಮೂಲಕ ವಿಮಾನಯಾನ ವೆಬ್‌ಸೈಟ್‌ನಲ್ಲಿ "ಬಿಗ್ ಮೆಂಬರ್" ಆಗಿ ಸೈನ್ ಅಪ್ ಮಾಡುವ ಮೂಲಕ ತಮ್ಮ ಮೂಲ ಬುಕಿಂಗ್ ಮಾಡುವಾಗ ಬಳಸುವ ಇ-ಮೇಲ್ ಐಡಿಯೊಂದಿಗೆ, ತಮ್ಮ ಅಸ್ತಿತ್ವದಲ್ಲಿರುವ ಪಿಎನ್‌ಆರ್ ಅನ್ನು ತಮ್ಮ ಬಿಗ್ ಮೆಂಬರ್ ಐಡಿಗೆ ಲಿಂಕ್ ಮಾಡಿ ಮತ್ತು ಅವರ ಬುಕಿಂಗ್ ಅನ್ನುಪಡೆಯಬಹುದು.