ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಪ್ರಸಕ್ತ ಹಣಕಾಸು ವರ್ಷ 400 ಮಂದಿಗೆ ಉದ್ಯೋಗ: ಖಾಸಗಿ ಬ್ಯಾಂಕುಗಳಲ್ಲಿ 17,000 ಮಂದಿಗೆ ಉದ್ಯೋಗ ನೇಮಕಾತಿ ಈ ಬೆಳವಣಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಕಳೆದ ವರ್ಷ 38,000 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ನವದೆಹಲಿ: ದೇಶದ ಅತಿ ದೊಡ್ಡ ಉದ್ಯೋಗದಾತ ಕ್ಷೇತ್ರ ಎಂಬ ಖ್ಯಾತಿಗೆ ಪಾತ್ರವಾಗಿರುವ ಬ್ಯಾಂಕಿಂಗ್ ಕ್ಷೇತ್ರ ಈ ಬಾರಿ ನಿರಾಸೆ ಮೂಡಿಸಿದೆ. ಸಮಗ್ರ ಬ್ಯಾಂಕಿಂಗ್ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡರೆ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡುತ್ತಿದ್ದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು 2021 ಹಣಕಾಸು ವರ್ಷದಲ್ಲಿ ಕೇವಲ 400 ಮಂದಿಗೆ ಉದ್ಯೋಗ ನೀಡಿವೆ.ಇದನ್ನೂ ಓದಿ: ಕೆನರಾ ಬ್ಯಾಂಕ್ ನೇಮಕಾತಿ 2021: 16 ಹುದ್ದೆಗಳು ಖಾಲಿ, 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದುಆರ್ ಬಿ ಐ ಬಿಡುಗಡೆಗೊಳಿಸಿರುವ ಅಂಕಿಅಂಶಗಳಿಂದ ಈ ಮಾಹಿತಿ ಹೊರಬಿದ್ದಿದೆ. ಆದರೆ ಈ ಬೆಳವಣಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಕಳೆದ ವರ್ಷ 38,000 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. 2019ರಲ್ಲಿ 8 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿತ್ತು ಎನ್ನುವುದು ಗಮನಾರ್ಹ.ಇದನ್ನೂ ಓದಿ: ಹಲವು ಶಾಸಕರಿಂದ ಸಹಕಾರ ಬ್ಯಾಂಕ್‌ಗಳಲ್ಲಿ 250 ಕೋಟಿ ರು. ಗೂ ಅಧಿಕ ಸಾಲ ಬಾಕಿ: ಎಸ್.ಟಿ ಸೋಮಶೇಖರ್ಇದೇ ವೇಳೆ ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 17,000 ಮಂದಿಗೆ ಉದ್ಯೋಗ ನೀಡಿದೆ. ಕಳೆದ ವರ್ಷ 50,000 ಮಂದಿಯನ್ನು ಉದ್ಯೋಗ ಮಾಡಿಕೊಳ್ಲಲಾಗಿತ್ತು. ಈ ಬಾರಿ ಉದ್ಯೋಗ ನೇಮಕಾತಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಆದರೆ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೀಗೆ ಹೋಲಿಸಿದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.ದೇಶಗಳ ಆರ್ಥಿಕ ಪ್ರಗತಿ ರ್ಯಾಂಕಿಂಗ್, ಪೇಚಿಗೆ ಸಿಲುಕಿದ ವಿಶ್ವ ಬ್ಯಾಂಕ್...! ಚೀನಾ ಓಲೈಕೆಗೆ ಮುಂದಾಗಿ 'ಮಹಾ ಎಡವಟ್ಟು'..!ಬ್ಯಾಡ್‌ ಬ್ಯಾಂಕ್‌ಗಳಿಗೆ 30,600 ಕೋಟಿ ರೂ. ಗ್ಯಾರಂಟಿ ಘೋಷಿಸಿದ ನಿರ್ಮಲಾ ಸೀತಾರಾಮನ್ಅಕ್ರಮ ಎಸಗಿದ ಸಹಕಾರ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ: ಸರ್ಕಾರದ ಭರವಸೆಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಖಾತೆದಾರರ ವಿವರಗಳ ಮೂರನೇ ಪಟ್ಟಿ ತಿಂಗಳಾಂತ್ಯದಲ್ಲಿ ಭಾರತದ ಕೈಸೇರಲಿದೆ!