ಜಿಯೋದಿಂದ ಗ್ರಾಹಕರಿಗೆ ಆಡಿಯೋ, ವೀಡಿಯೊ ವೈಫೈ ಕರೆ ಮಾಡುವ ಅವಕಾಶ ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ಜಿಯೋ, ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಮುಂಬೈ: ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ರಿಲಯನ್ಸ್ ಜಿಯೋ, ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ಒದಗಿಸಲು ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪರೀಕ್ಷಿಸುತಿತ್ತು. ಇದೀಗ ಆಡಿಯೋ, ವಿಡಿಯೋ ಕರೆ ಮಾಡುವ ಸೇವೆಗೆ ಚಾಲನೆ ನೀಡಿದ್ದು, ಗ್ರಾಹಕರು ಜಿಯೊ ವೈಫೈ ಕರೆ ಮಾಡಲು ಯಾವುದೇ ವೈ-ಫೈ ಸಂಪರ್ಕ ಜಾಲವನ್ನೂ ಬಳಸಬಹುದು.ಆಡಿಯೋ ಮತ್ತು ವಿಡಿಯೊ ಕರೆಗಳು ಮತ್ತು - ನಡುವೆ ಬದಲಾಗಲಿವೆ. ಜಿಯೋ ವೈ-ಫೈ ಕರೆ ಚಾಲನೆಗೊಳಿಸಲು, ./ ನಲ್ಲಿ ವಿವರಗಳಿವೆ. ಇದೇ 16ರ ಒಳಗೆ ದೇಶದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.ವೈಫೈ ಮೂಲಕ ಸ್ಪಷ್ಟವಾದ ವಾಯ್ಸ್ ಮತ್ತು ವಿಡಿಯೊ ಕರೆ ಸಾಧ್ಯವಾಗಲಿದ್ದು ಇದಕ್ಕಾಗಿ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ ಎಂದು ಜಿಯೊ ಭರವಸೆ ನೀಡಿದೆ.