ನೆಟ್ಫ್ಲಿಕ್ಸ್ ನಲ್ಲಿ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಪ್ರಸಾರ: ಅಮೆಜಾನ್ ವಿಡಿಯೋ ದಲ್ಲೂ ನೋಡಬಹುದು! ತಲೈವಿ ಸಿನೆಮಾವನ್ನು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್ನಲ್ಲಿ ಪ್ರಸಾರ ಕಾಣಲಿದೆ. ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾದ ತಲೈವಿ ಸಿನಿಮಾ ಇಂದಿನಿಂದ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರಗೊಳ್ಳುತ್ತಿದೆ. ಈ ಕುರಿತು ತಲೈವಿ ನಾಯಕಿ ಬಾಲಿವುಡ್ ನಟಿ ಕಂಗನಾ ರಣಾವತ್ 'ಕೊ'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ತಲೈವಿ ತಮಿಳು ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಸಂಸ್ಥೆ ನಕಾರ: ಸ್ಟಾರ್ ನಟರ ಕಾಲೆಳೆದ ಕಂಗನಾಸೆ.10, ಗಣೇಶ ಚತುರ್ಥಿ ದಿನದಂದೇ ‘ತಲೈವಿ’ ಸಿನಿಮಾ ಥಿಯೇಟರುಗಳಲ್ಲಿ ಬಿಡುಗಡೆಗೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಲೈವಿ ಮೂಡಿ ಬಂದಿದೆ. ತಲೈವಿ ಸಿನೆಮಾವನ್ನು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ಸಾಮಾನ್ಯವಾಗಿ ಒಂದು ಸಿನಿಮಾ ಒಂದೇ ಡಿಜಿಟಲ್ ಫ್ಲಾರ್ಟ್ಫಾರ್ಮ್ನಲ್ಲಿ ಪ್ರಸಾರ ಕಾಣುತ್ತಿತ್ತು. ಇದೇ ಮೊದಲ ಬಾರಿಗೆ ತಲೈವಿ ಸಿನಿಮಾ ಎರಡು ಒಟಿಟಿ ಫ್ಲಾರ್ಟ್ಫಾರ್ಮ್ನಲ್ಲಿ ತೆರೆ ಕಾಣುತ್ತಿವೆ. ಇದನ್ನೂ ಓದಿ: ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು ಬದಲಾವಣೆ ಮಾಡಿ: ಕಂಗನಾ ರಣಾವತ್ ಹೊಸ ವಿವಾದನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್ನಲ್ಲಿ ಪ್ರಸಾರ ಕಾಣಲಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದರೆ, ಎಂ.ಜಿ. ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಹಾಗೂ ಎಂ. ಕರುಣಾನಿಧಿಯಾಗಿ ನಾಸರ್ ಬಣ್ಣ ಹಚ್ಚಿದ್ದಾರೆ. ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಸ್ಯಾಟಲೈಟ್ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಗೆ ಪ್ರತಿಷ್ಟಿತ ಎಮ್ಮೀ ಅವಾರ್ಡ್ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ