ಎಲಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕರ್ನಾಟಕ, ಉತ್ತರಪ್ರದೇಶ, ದೆಹಲಿ ರಾಜ್ಯಗಳು ಮುಂಚೂಣಿ: ನಿತಿನ್ ಗಡ್ಕರಿ ಮಾಹಿತಿ ಎಲಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ ಅವುಗಳ ಮೇಲಿನ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಶೇ. 12ರಿಂದ ಶೇ.5ಕ್ಕೆ ಇಳಿಸಿತ್ತು. ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ಕರ್ನಾಟಕ, ದೆಹಲಿ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಎಲಕ್ಟ್ರಿಕ್ ವಾಹನಗಳು ಮಾರಾಟವಾಗುತ್ತಿರುವುದು ಬಹಿರಂಗವಾಗಿದೆ.ಇದನ್ನೂ ಓದಿ: ಬೌನ್ಸ್ ನಿಂದ ಕಡಿಮೆ ದರದ ಇ-ಬೈಕ್ ಬಿಡುಗಡೆ: ಬೆಲೆ ಕೇವಲ 45099 ರೂ. ನಿಂದ ಪ್ರಾರಂಭಇದುವರೆಗೂ ದೇಶದಲ್ಲಿ 8.7 ಲಕ್ಷ ಎಲಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಅದರಲ್ಲಿ ಉತ್ತರಪ್ರದೇಶ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದೆ. ಐದನೇ ಮತ್ತು ಆರನೇ ಸ್ಥಾನಗಳಲ್ಲಿ ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯವಿದೆ. ಇದನ್ನೂ ಓದಿ: ಒಂದೇ ದಿನ 600 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಿದ ಓಲಾ: ಸಿಇಒ ಭವೀಶ್ ಘೋಷಣೆಎಲಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ ಅವುಗಳ ಮೇಲಿನ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಶೇ. 12ರಿಂದ ಶೇ.5ಕ್ಕೆ ಇಳಿಸಿತ್ತು.ಇದನ್ನೂ ಓದಿ: ಹೊಸ ವಾಹನಗಳ ನೋಂದಣಿ ತಿದ್ದುಪಡಿ ಅಧಿನಿಯಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್