ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ ಲಾಭದ ಜೊತೆ ಖರ್ಚಿನ ಪ್ರಮಾಣವೂ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಂಸ್ಥೆಯ ಖರ್ಚು ವೆಚ್ಚ ಶೇ.8.33ರಷ್ಟು ಏರಿಕೆ ಕಂಡಿದೆ. ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಆದಾಯ ಲೆಕ್ಕಪತ್ರವನ್ನು ಪ್ರಕಟಿಸಿದೆ. 2020-21ನೇ ಸಾಲಿನಲ್ಲಿ ಸಂಸ್ಥೆ 9,872 ಕೋಟಿ ಆದಾಯ ದಾಖಲಿಸಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.14 ಪ್ರತಿಶತ ಪ್ರಗತಿಯನ್ನು ಸಂಸ್ಥೆ ದಾಖಲಿಸಿದೆ. ಇದನ್ನೂ ಓದಿ: ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!ಲಾಭದ ಜೊತೆ ಖರ್ಚಿನ ಪ್ರಮಾಣವೂ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಂಸ್ಥೆಯ ಖರ್ಚು ವೆಚ್ಚ ಶೇ.8.33ರಷ್ಟು ಏರಿಕೆ ಕಂಡಿದೆ. ಇದನ್ನೂ ಓದಿ: ಪತಂಜಲಿ ಮುಖ್ಯ ಕ್ಯಾಂಪಸ್ ನಲ್ಲಿ ಯಾರಿಗೂ ಕೊರೋನಾ ಸೋಂಕಿಲ್ಲ: ಬಾಬಾ ರಾಮದೇವ್2016ರಲ್ಲಿ ಸಂಸ್ಥೆ 10,500 ಕೋಟಿ ಆದಾಯ ಗಳಿಸಿತ್ತು ಎನ್ನುವುದು ಗಮನಾರ್ಹ. 2018-19ರಲ್ಲಿ ಆದಾಯ 8,330 ಕೋಟಿಗೆ ಕುಸಿದಿತ್ತು. ಸದ್ಯ ಸಂಸ್ಥೆ ಮಾರುಕಟ್ಟೆಯಲ್ಲಿ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿದ್ದು ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದೆ.ಇದನ್ನೂ ಓದಿ: ಕೊರೋನಿಲ್ ವಿವಾದ: ಯೋಗ ಗುರು ಬಾಬಾ ರಾಮ್ ದೇವ್ ಬಂಧಿಸುವಂತೆ ಒತ್ತಾಯ