ಚಿನ್ನಾಭರಣಗಳಿಗೆ ಶೀಘ್ರದಲ್ಲಿಯೇ ಹಾಲ್ ಮಾರ್ಕಿಂಗ್ ಕಡ್ಡಾಯ- ರಾಮ್ ವಿಲಾಸ್ ಪಾಸ್ವನ್ ಶೀಘ್ರದಲ್ಲಿಯೇ ದೇಶದಲ್ಲಿ ಮಾರಾಟವಾಗುವ ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವನ್ ಹೇಳಿದ್ದಾರೆ.