ಜಿಎಸ್ ಟಿ ದರ ಬದಲಾವಣೆ, ಜುಲೈ 18 ರಿಂದ ಜಾರಿ ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. 5 ರಷ್ಟು ಜೆಎಸ್ ಟಿ ವಿಧಿಸಿ ಶುಕ್ರವಾರ... ನವದೆಹಲಿ: ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ 5,000 ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. 5 ರಷ್ಟು ಜೆಎಸ್ ಟಿ ವಿಧಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಜುಲೈ 18ರಿಂದ ಜಾರಿಗೆ ಬರಲಿದೆ.ಜೂನ್ 28 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್ಟಿ ಸಭೆಯಲ್ಲಿ ನಿರ್ಧರಿಸಿದಂತೆ ಆಸ್ಪತ್ರೆಗಳ ಜಿಎಸ್ ಟಿ ದರ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ) ತಿಳಿಸಿದೆ.ಇದನ್ನು ಓದಿ: ಆಹಾರ ಧಾನ್ಯಗಳ ಮೇಲೆ ಜಿಎಸ್ ಟಿ: ಅಕ್ಕಿ ಗಿರಣಿದಾರರಿಂದ ನಾಳೆ ಪ್ರತಿಭಟನೆಈ ಬದಲಾವಣೆ ಜುಲೈ 18 ರಿಂದ ಅನ್ವಯವಾಗಲಿದೆ. ತೀವ್ರ ನಿಗಾ ಘಟಕಗಳನ್ನು ಹೊರತುಪಡಿಸಿ ರೂ. 5,000 ಕ್ಕಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆಯ ಕೊಠಡಿಗಳ ಮೇಲೆ ಶೇ. 5 ರಷ್ಟು ಜಿಎಸ್‌ಟಿ ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಸಿಬಿಐಸಿ ಹೇಳಿದೆ.ಆರೋಗ್ಯ ಕ್ಷೇತ್ರವು ಹೆಚ್ಚಾಗಿ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದರೂ, ಕೊಠಡಿ ಬಾಡಿಗೆಗೆ ತೆರಿಗೆ ವಿಧಿಸುವುದರಿಂದ ಇನ್ನು ಮುಂದೆ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತದೆ.ಜುಲೈ 18 ರಿಂದ ಈ ಸರಕುಗಳು ದುಬಾರಿಯಾಗಲಿವೆ