ವಿಮಾನ ಪ್ರಯಾಣ ಮತ್ತಷ್ಟು ದುಬಾರಿ: ದೇಶಿ ವಿಮಾನ ದರಗಳ ಮಿತಿ ಶೇ.9.83 ರಿಂದ 12.82ಕ್ಕೆ ಹೆಚ್ಚಳ ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ. ನವದೆಹಲಿ: ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.ಕೊರೋನಾ ವೈರಸ್‌ನಿಂದಾಗಿ ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25, 2020 ರಂದು ವಿಮಾನ ಸೇವೆಗಳನ್ನು ಪುನರಾರಂಭಿಸಿದಾಗ ವಿಮಾನಯಾನದ ಅವಧಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿತ್ತು.ಕೊರೋನಾ ವೈರಸ್ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡಲು ಕನಿಷ್ಠ ದರ ನಿಗದಿಪಡಿಸಲಾಗಿದೆ.ಆಗಸ್ಟ್ 12, 2021 ರ ಆದೇಶದಲ್ಲಿ, ವಿಮಾನಯಾನ ಸಚಿವಾಲಯವು 40 ನಿಮಿಷಗಳ ಅವಧಿಯ ವಿಮಾನ ಪ್ರಯಾಣದ ದರದ ಮಿತಿಯನ್ನು ರೂ 2,600 ರಿಂದ ರೂ 2,900 ಕ್ಕೆ ಹೆಚ್ಚಿಸಿದೆ - ಇದು ಶೇಕಡಾ 11.53 ರಷ್ಟು ಹೆಚ್ಚಳವಾಗಿದೆ.ಇನ್ನು 40 ನಿಮಿಷಗಳ ಅವಧಿಯ ವಿಮಾನ ಪ್ರಮಾಣ ದರದ ಮೇಲಿನ ಮಿತಿಯನ್ನು ಅನ್ನು ಶೇ. 12.82 ರಷ್ಟು ಹೆಚ್ಚಿಸಿ 8,800 ರೂ.ಅಂತೆಯೇ, 40-60 ನಿಮಿಷಗಳ ನಡುವಿನ ಅವಧಿಯ ವಿಮಾನ ಪ್ರಯಾಣದ ದರವನ್ನು ಈಗ ರೂ 3,300 ರ ಬದಲಾಗಿ ರೂ 3,700ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.