ಸೂಚ್ಯಂಕದಲ್ಲಿ ಚೀನಾವನ್ನು ಮೀರಿಸಿದ ಭಾರತ! ಸೂಚ್ಯಂಕ ದೊಡ್ಡ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪನಿಗಳನ್ನು ಒಳಗೊಂಡಿದೆ. ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ, ಮಧ್ಯಮ ಮತ್ತು ಸಣ್ಣ ಮೊತ್ತದ ಷೇರುಗಳನ್ನು ಒಳಗೊಳ್ಳುತ್ತದೆ. ನವದೆಹಲಿ: ಭಾರತವು ಎಮರ್ಜಿಂಗ್ ಮಾರ್ಕೆಟ್ಸ್ ಇನ್ವೆಸ್ಟಬಲ್ ಮಾರ್ಕೆಟ್ ಸೂಚ್ಯಂಕದಲ್ಲಿ ಚೀನಾವನ್ನು ಮೀರಿಸಿದೆ. ಸೆಪ್ಟೆಂಬರ್ 2024ರಲ್ಲಿ ಮೋರ್ಗನ್ ಸ್ಟ್ಯಾನ್ಲಿ ಪ್ರಕಟಿಸಿದ ವರದಿ ಪ್ರಕಾರ, ನಲ್ಲಿ ಭಾರತದ ತೂಕ ಶೇ. 22.27ಕ್ಕೆ ಏರಿದೆ. ಆದರೆ ಚೀನಾದ ಸಂಯೋಜಿತ ತೂಕವು ಶೇ. 21.58ಕ್ಕೆ ಇಳಿದಿದೆ. ಸೂಚ್ಯಂಕ ದೊಡ್ಡ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕಂಪನಿಗಳನ್ನು ಒಳಗೊಂಡಿದೆ. ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, ದೊಡ್ಡ, ಮಧ್ಯಮ ಮತ್ತು ಸಣ್ಣ ಮೊತ್ತದ ಷೇರುಗಳನ್ನು ಒಳಗೊಳ್ಳುತ್ತದೆ. ಚೀನಾದಲ್ಲಿನ ಆರ್ಥಿಕ ಅಡೆತಡೆಗಳಿಂದಾಗಿ ಚೀನಾದ ಮಾರುಕಟ್ಟೆಗಳು, ಸಂಕಷ್ಟ ಎದುರಿಸುತ್ತಿರುವಾಗ ಭಾರತದ ಮಾರುಕಟ್ಟೆಗಳು ಅನುಕೂಲಕರವಾದ ಸ್ಥಲ ಆರ್ಥಿಕ ಪರಿಸ್ಥಿತಿಗಳಿಂದ ಲಾಭ ಪಡೆದಿವೆ.ಇತ್ತೀಚಿನ ಕಾಲದಲ್ಲಿ ಭಾರತದ ಆರ್ಥಿಕತೆಯ ಬಲವಾದ ಸಮಷ್ಟಿ ಆರ್ಥಿಕ ಮೂಲಾಂಶಗಳು ಹಾಗೂ ಭಾರತೀಯ ಕಂಪನಿಗಳ ದೃಢವಾದ ಕಾರ್ಯನಿರ್ವಹಣೆಯಿಂದ ಪ್ರೇರಿತವಾಗಿ ಭಾರತ ಅತ್ಯಂತ ಶ್ರೇಷ್ಟ ಈಕ್ವಿಟಿ ಮಾರುಕಟ್ಟೆ ಕಾರ್ಯಕ್ಷಮತೆ ತೋರಿಸಿದೆ. ಇದಲ್ಲದೆ ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿನ ಲಾಭಗಳು ವ್ಯಾಪಕವಾಗಿದ್ದು, ದೊಡ್ಡ ಮಾರುಕಟ್ಟೆ ಮೌಲ್ಯದ ಕಂಪನಿಗಳ ಜೊತೆಗೆ ಮಧ್ಯಮ ಮತ್ತು ಸಣ್ಣ ಮಾರುಕಟ್ಟೆ ಮೌಲ್ಯದ ಕಂಪನಿಗಳ ಸೂಚ್ಯಂಕಗಳಲ್ಲೂ ಪ್ರತಿಫಲಿಸಲಿವೆ.2024ರ ಮೊದಲಾರ್ದದಲ್ಲಿ ವಿದೇಶ ನೇರ ಹೂಡಿಕೆ () ಶೇ. 47 ರಷ್ಟು ಹೆಚ್ಚಳವಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆ ಮತ್ತು ಭಾರತೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಗಣನೀಯ ವಿದೇಶಿ ಪೋರ್ಟ್ ಪೋಲಿಯೊ ಹೂಡಿಕೆಗಳು ಈ ಸಕಾರಾತ್ಮಕ ಪ್ರವೃತ್ತಿಗೆ ಕೊಡುಗೆ ನೀಡಿದ ಪ್ರಮುಖ ಅಂಶಗಳಾಗಿವೆ. ಮಾರ್ಚ್ 24ರಿಂದ ಆಗಸ್ಟ್ 24ರವರೆಗೂ EMನಲ್ಲಿ ಭಾರತದ ತೂಕ ಶೇ.18 ರಿಂದ ಶೇ.20ಕ್ಕೆ ಏರಿದೆ. ಆದರೆ ಇದೇ ಅವಧಿಯಲ್ಲಿ ಚೀನಾದ ತೂಕ ಶೇ.25 ರಿಂದ ಶೇ. 24.5ಕ್ಕೆ ಕುಸಿದಿದೆ., ನಲ್ಲಿ ಈ ಪುನರ್ ಸಮತೋಲನದ ನಂತರ ವಿಶ್ಲೇಷಕರ ಅಂದಾಜಿನ ಪ್ರಕಾರ ಭಾರತೀಯ ಈಕ್ವಿಟಿಗಳು ಸುಮಾರು 4 ರಿಂದ 4.5 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಹೊಡಿಕೆ ಹರಿವನ್ನು ಕಾಣಬಹುದು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅಪೇಕ್ಷಿತ ಹೂಡಿಕೆಗಳ ಗತಿಯನ್ನು ಕಾಪಾಡಿಕೊಳ್ಳಲು ಭಾರತಕ್ಕೆ ದೇಶಿಯ ಮತ್ತು ವಿದೇಶಿ ಮೂಲಗಳಿಂದಲೂ ಬಂಡವಾಳದ ಅಗತ್ಯವಿದೆ. ಈ ಸಂದರ್ಭದಲ್ಲಿ ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ತೂಕದ ಹೆಚ್ಚಳವು ಸಕಾರಾತ್ಮಕ ಮಹತ್ವ ಪಡೆಯುತ್ತದೆ.