ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರುತಿ ಸುಜುಕಿ ಉತ್ಪಾದನಾ ಸಾಮರ್ಥ್ಯ ಕುಂಠಿತ ಈಗಾಗಲೇ 2 ಲಕ್ಷ ಗ್ರಾಹಕರು ಕಾರುಗಳನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾದಿದ್ದಾರೆ. ಗ್ರಾಹಕರಿಗೆ ನಿಗದಿತ ಸಮಯಕ್ಕೆ ಕಾರು ಡೆಲಿವರಿ ಮಾಡುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ನವದೆಹಲಿ: ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ಮುಂದಿನ ತಿಂಗಳಿನಿಂದ ಕಂಪನಿಯ ಪ್ರಾಡಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರಲಿರುವುದಾಗಿ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ತಿಳಿಸಿದೆ. ಸಂಸ್ಥೆಯ ಎರಡು ಪ್ರಮುಖ ಘಟಕಗಳಾದ ಹರಿಯಾಣ ಮತ್ತು ಗುಜರಾತ್ ನಲ್ಲಿ ಕಾರು ತಯಾರಿಕೆಯ ಮೇಲೆ ಹೊಡೆತ ಬೀಳಲಿರುವುದಾಗಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ: ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ ಹರಿಯಾಣದಲ್ಲಿನ ಘಟಕದಲ್ಲಿ ವರ್ಷಕ್ಕೆ 15 ಲಕ್ಷ ಕಾರು ಸಿದ್ಧಗೊಳ್ಳುತ್ತಿದ್ದವು ಎನ್ನುವುದು ಗಮನಾರ್ಹ. ಹರಿಯಾಣ ಮತ್ತು ಗುಜರಾತ್ ಎರಡೂ ಘಟಕಗಳಲ್ಲಿ ಸಂಸ್ಥೆಯ ಶೇ.85 ಪ್ರತಿಶತ ಕಾರುಗಳು ತಯಾರಾಗುತ್ತಿದ್ದವು. ಇದೀಗ ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆಯ ಸಾಮರ್ಥ್ಯ ಶೇ.60 ಪ್ರತಿಶತಕ್ಕೆ ಇಳಿಯಲಿದೆ ಎಂದು ಪರಿಣತರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!ಈಗಾಗಲೇ 2 ಲಕ್ಷ ಗ್ರಾಹಕರು ಕಾರುಗಳನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾದಿದ್ದಾರೆ. ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದಾಗಿ ಇದೀಗ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಕಾರು ಡೆಲಿವರಿ ಮಾಡುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಇದನ್ನೂ ಓದಿ: ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ ಪ್ರಾವಿಡೆಂಟ್ ಫಂಡ್ ಚಂದಾದಾರರಿಗೆ ಸಿಹಿ ಸುದ್ದಿ: 8.5% ಬಡ್ಡಿ ನೀಡಲು ಕೇಂದ್ರದ ಅನುಮೋದನೆಹೊಸ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ದೀಪಾವಳಿಗೆ ಲಭ್ಯ: ಬೆಲೆ 6,499 ರೂ.ದಿನವೊಂದಕ್ಕೆ 27 ಕೋಟಿ ದಾನ ಮಾಡಿ, ದೇಶದ ಅತ್ಯುನ್ನತ ಉದಾರಿ ಉದ್ಯಮಿಯಾದ ಅಜಿಂ ಪ್ರೇಂ ಜಿ!ಐಎಂಎಒಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿರುವ ಗೀತ ಗೋಪಿನಾಥ್, ಹಾರ್ವರ್ಡ್ ವಿವಿಗೆ ವಾಪಸ್ನಿಮ್ಮ ವಿಮೆ ಹಣ ಹಕ್ಕು ತಿರಸ್ಕೃತವಾಗಬಹುದು! ಯಾವಾಗ, ಹೇಗೆ ಮತ್ತು ಏಕೆ?: ಬನ್ನಿ ತಿಳಿದುಕೊಳ್ಳೋಣ