ದೇಶದಲ್ಲಿ ನಕಲಿ ದಾಖಲೆ ಬಳಸಿ 6.80 ಲಕ್ಷ ಮೊಬೈಲ್ ಸಂಪರ್ಕ! ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ () ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್‌ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ. ನವದೆಹಲಿ: ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ () ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್‌ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ.ಈ ಗುರುತಿಸಲಾದ ಮೊಬೈಲ್ ಸಂಖ್ಯೆಗಳನ್ನು ತಕ್ಷಣ ಮರು-ಪರಿಶೀಲಿಸುವಂತೆ ಗೆ ನಿರ್ದೇಶನ ನೀಡಿದೆ. ಅಲ್ಲದೆ ಗುರುತಿಸಿರುವ ಸಂಪರ್ಕಗಳನ್ನು 60 ದಿನಗಳಲ್ಲಿ ಮರು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಮರು ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಫಲವಾದರೆ ಸಂಬಂಧಿಸಿದ ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ. ಸುಧಾರಿತ ವಿಶ್ಲೇಷಣೆಯು ಈ ಸಂಭಾವ್ಯ ಮೋಸದ ಸಂಪರ್ಕಗಳನ್ನು ಗುರುತಿಸಿದೆ ಎಂದು ಹೇಳಿದೆ.