5G ಪ್ರಯಾಣದಲ್ಲಿ ವೊಡಾಫೋನ್, ಬಿಎಸ್‌ಎನ್‌ಎಲ್ ಹಿಂದೆ; ಜಿಯೋ, ಏರ್‌ಟೆಲ್ ತುಂಬಾ ಮುಂದೆ! ಟೆಲಿಕಾಂ ಸೇವಾ ಪೂರೈಕೆದಾರರು ಜುಲೈ 7, 2023ರ ವರೆಗೆ ದೇಶದಾದ್ಯಂತ ಸುಮಾರು 2,81,948 5G ಟವರ್‌ಗಳನ್ನು ಸ್ಥಾಪಿಸಿವೆ. ಆದರೆ ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ಮಾತ್ರ ಈ 5ಜಿ ಸೇವೆಯಿಂದ ಇನ್ನೂ ದೂರವೇ... ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರು ಜುಲೈ 7, 2023ರ ವರೆಗೆ ದೇಶದಾದ್ಯಂತ ಸುಮಾರು 2,81,948 5G ಟವರ್‌ಗಳನ್ನು ಸ್ಥಾಪಿಸಿವೆ. ಆದರೆ ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ಮಾತ್ರ ಈ 5ಜಿ ಸೇವೆಯಿಂದ ಇನ್ನೂ ದೂರವೇ ಉಳಿದಿವೆ.ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ(ವಿಐಎಲ್) ಮತ್ತು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) 5G ವ್ಯವಸ್ಥೆಯಿಂದ ಬಹುತೇಕ ದೂರ ಉಳಿದಿವೆ.ಇದನ್ನು ಓದಿ: 4G, 5G ತರಂಗಾಂತರ ಹಂಚಿಕೆಗಾಗಿ ಬಿಎಸ್ಎನ್ಎಲ್ ಗೆ 89,047 ಕೋಟಿ ರೂ. ಪ್ಯಾಕೇಜ್ ಗೆ ಕೇಂದ್ರ ಸಂಪುಟ ಅಸ್ತುದೇಶದ ಅತಿದೊಡ್ಡ ಟೆಲಿಕಾಂ ರಿಲಯನ್ಸ್ ಜಿಯೋ 228,689 ಘಟಕಗಳೊಂದಿಗೆ ಗರಿಷ್ಠ ಸಂಖ್ಯೆಯ ಟವರ್‌ಗಳನ್ನು ನಿಯೋಜಿಸಿದೆ. ನಂತರ ಭಾರ್ತಿ ಏರ್‌ಟೆಲ್ 53,223 ಟವರ್‌ಗಳನ್ನು ಹೊಂದಿದೆ. ಕೇವಲ 36 5G ಟವರ್‌ಗಳನ್ನು ದೆಹಲಿ ಮತ್ತು ಪುಣೆಯಲ್ಲಿ, ಅದು ಪ್ರಾಯೋಗಿಕ ಆಧಾರದ ಮೇಲೆ ನಿಯೋಜಿಸಿದೆ.ಅಕ್ಟೋಬರ್ 2022 ರಿಂದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ದೇಶದಲ್ಲಿ ತಮ್ಮ 5G ನೆಟ್‌ವರ್ಕ್‌ಗಳನ್ನು ಅತ್ಯಂತ ವೇಗವಾಗಿ ಸ್ಥಾಪಿಸುತ್ತಿವೆ. ಆದರೆ ವಿಐಎಲ್ 5G ರೇಸ್‌ನಿಂದ ಬಹುತೇಕ ಕಾಣೆಯಾಗಿದೆ.ಇದನ್ನು ಓದಿ: ಏಪ್ರಿಲ್ 2024ರ ವೇಳೆಗೆ ದೇಶದಲ್ಲಿ ಬಿಎಸ್ಎನ್ಎಲ್ 5ಜಿ ಸೇವೆ ಆರಂಭ: ಅಶ್ವಿನಿ ವೈಷ್ಣವ್ಹಣದ ಕೊರತೆ ಮತ್ತು ಹಲವಾರು ಇತರ ಸಮಸ್ಯೆಗಳನ್ನು ವಿಐಎಲ್ ಉಲ್ಲೇಖಿಸಿದ್ದು, 5G ರೋಲ್‌ಔಟ್‌ಗಾಗಿ ಮಾರಾಟಗಾರರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದೆ. ಅದೇ ರೀತಿ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ತನ್ನ 4G ನೆಟ್‌ವರ್ಕ್‌ಗಾಗಿ ಇನ್ನೂ ಪ್ರಯೋಗಗಳನ್ನು ನಡೆಸುತ್ತಿದೆ. ಬಿಎಸ್ಎನ್ಎಲ್ ಇನ್ನೂ ವಾಣಿಜ್ಯ 4G ಸೇವೆಗಳನ್ನು ಪ್ರಾರಂಭಿಸಿಲ್ಲ. ಆದಾಗ್ಯೂ, ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು, ತನ್ನ 4G ಸೇವೆಯನ್ನು ಪ್ರಾರಂಭಿಸಿದ ತಕ್ಷಣವೇ 5G ನೆಟ್‌ವರ್ಕ್‌ಗೆ ಬದಲಾಯಿಸುತ್ತದೆ ಎಂದು ಈ ಹಿಂದೆ ಹೇಳಿದ್ದರು.