ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಶೇ.50 ರಷ್ಟು ಬಡ್ಡಿ ಮನ್ನಾ ಮಾಡಿದ ಬ್ಯಾಂಕ್ ಕೊರೋನಾ ಸೋಂಕಿನಿಂದ ಆರ್ಥಿಕ ಸ್ಥಿತಿ ಕುಸಿದಿರುವ ಬೆನ್ನಲ್ಲೇ ಬೆಂಗಳೂರಿನ ಬ್ಯಾಂಕ್ ವೊಂದು ತನ್ನ ಗ್ರಾಹಕರ ಹಣಕಾಸಿನ ಹೊರೆ ಕಡಿಮೆ ಮಾಡಲು ಮುಂದಾಗಿದೆ. ಬೆಂಗಳೂರು: ಕೊರೋನಾ ಸೋಂಕಿನಿಂದ ಆರ್ಥಿಕ ಸ್ಥಿತಿ ಕುಸಿದಿರುವ ಬೆನ್ನಲ್ಲೇ ಬೆಂಗಳೂರಿನ ಬ್ಯಾಂಕ್ ವೊಂದು ತನ್ನ ಗ್ರಾಹಕರ ಹಣಕಾಸಿನ ಹೊರೆ ಕಡಿಮೆ ಮಾಡಲು ಮುಂದಾಗಿದೆ.ಇನ್ ಫೆಂಟ್ರಿ ರಸ್ತೆಯಲ್ಲಿರುವ ಗಾರ್ಡಿಯನ್ ಬ್ಯಾಂಕ್ ಸಾಲ ಪಡೆದಿರುವ ಗ್ರಾಹಕರ ಬಡ್ಡಿಯಲ್ಲಿ ಶೇ.50ರಷ್ಟನ್ನು ಮನ್ನ ಮಾಡಲು ನಿರ್ಧರಿಸಿದೆ.45 ದಿನಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸುದೀರ್ಘ ಚರ್ಚೆ ನಡೆಸಿ ಅರ್ಧದಷ್ಟು ಬಡ್ಡಿ ಮನ್ನಾ ಮಾಡುವುದಾಗಿ ತಿಳಿಸಿದೆ. ಅಸ್ತಿತ್ವದಲ್ಲಿರುವ ಎನ್‌ಪಿಎ ಖಾತೆಗಳಿಗೆ ಈ ಬಡ್ಡಿ ಮನ್ನಾ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.ಮಾರ್ಚ್ 27 ರಂದು ರಿಸರ್ವ್ ಬ್ಯಾಂಕ್ ಇಂಡಿಯಾ ಬಿಡುಗಡೆ ಮಾಡಿದ ಸುತ್ತೋಲೆ ಅನ್ವಯ ಆರ್ ಬಿಐ ನಿರ್ದೇಶನಗಳನ್ನು ಪಾಲಿಸುತ್ತಿರುವುದಾಗಿ ಬ್ಯಾಂಕ್ ಅಧ್ಯಕ್ಷ ಕೊಲಿನ್ ಟಿಮ್ಸ್ ಹೇಳಿದ್ದಾರೆ.ಆದಾಗ್ಯೂ, ಗಾರ್ಡಿಯನ್ ಬ್ಯಾಂಕಿನ ನಿರ್ವಹಣೆ ಮತ್ತು ಮಂಡಳಿಯು ಈ ನಿಷೇಧವನ್ನು ಮೀರಿ ಪರಿಹಾರವನ್ನು ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.ನಗರದಲ್ಲಿ ಗಾರ್ಡಿಯನ್ ಬ್ಯಾಂಕ್ ನ ಆರು ಶಾಖೆಗಳಿದ್ದು 60 ಸಿಬ್ಬಂದಿಯಿದ್ದು, 30ಸಾವಿರ ಗ್ರಾಹಕರು ಮತ್ತು 3 ಸಾವಿರ ಸಾಲಗಾರರಿದ್ದಾರೆ. 67.87 ಲಕ್ಷ ರೂ.ಗಳನ್ನು ಮನ್ನಾ ಮಾಡಲಾಗುವುದು ”ಎಂದು ಸಿಇಒ ಶರೋನ್ ಜೋಸೆಫ್ ಹೇಳಿದ್ದಾರೆ. ಜೊತೆಗೆ ಸಿಬ್ಬಂದಿಗಳ ವೇತನ ಕಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಯಾರನ್ನು ಕೆಲಸದಿಂದ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.