ಬ್ಯಾಂಕಿಂಗ್ ಉದ್ಯಮದ ಪ್ರಮುಖ ಎನ್ ವಘುಲ್ ನಿಧನ ಬ್ಯಾಂಕಿಂಗ್ ಉದ್ಯಮದ ಹಿರಿಯ, ಪ್ರಮುಖ ವ್ಯಕ್ತಿಯಾಗಿದ್ದ ಎನ್ ವಘುಲ್ (88) ಶನಿವಾರ (ಮೇ.18) ರಂದು ಮಧ್ಯಾಹ್ನ ನಿಧನರಾದರು. ಚೆನ್ನೈ: ಬ್ಯಾಂಕಿಂಗ್ ಉದ್ಯಮದ ಹಿರಿಯ, ಪ್ರಮುಖ ವ್ಯಕ್ತಿಯಾಗಿದ್ದ ನಾರಾಯಣನ್ ವಘುಲ್ ( ) (88) ಶನಿವಾರ (ಮೇ.18) ರಂದು ಮಧ್ಯಾಹ್ನ ನಿಧನರಾದರು.ವಘುಲ್ ಬ್ಯಾಂಕಿಂಗ್ ಉದ್ಯಮದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಐಸಿಐಸಿಐ ಎಂಬ ಹಣಕಾಸು ಸಂಸ್ಥೆಯನ್ನು ಖಾಸಗಿ ಸ್ವಾಮ್ಯದ ಬ್ಯಾಂಕ್ ನ್ನಾಗಿ ಬೆಳೆಸುವಲ್ಲಿ ವಘುಲ್ ಮಹತ್ವದ ಪಾತ್ರ ವಹಿಸಿದ್ದರು.ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ವೆಂಟಿಲೇಟರ್ ಸಹಾಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. 2006 ರಲ್ಲಿ ವಘುಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಚೆನ್ನೈ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.1960 ರಲ್ಲಿ ಉದಾರೀಕರಣದ ಅವಧಿಗೂ ಮುನ್ನ ವಘುಲ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು ಆ ಬಳಿಕ ಬ್ಯಾಂಕಿಂಗ್ ವೃತ್ತಿ ಬಿಟ್ಟು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ನಲ್ಲಿ ಬೋಧನಾ ವೃತ್ತಿಯನ್ನು ಆರಂಭಿಸಿದ್ದರು. ಎರಡು ವರ್ಷಗಳಲ್ಲಿ, ಅವರು ಪುಣೆ ಮೂಲದ ಸಂಸ್ಥೆಯಲ್ಲಿ ನಿರ್ದೇಶಕರಾದರು ಆದರೆ ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೀಘ್ರದಲ್ಲೇ ಬ್ಯಾಂಕಿಂಗ್‌ಗೆ ಮರಳಿದರು.1981 ರಲ್ಲಿ, ವಘುಲ್ 44 ನೇ ವಯಸ್ಸಿನಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದರು, ಕಿರಿಯ ವಯಸ್ಸಿನಲ್ಲೇ ಯಾವುದೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನ್ನು ಮುನ್ನಡೆಸಿದ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದರು.